ನವದೆಹಲಿ: ‘ಸಂಸತ್ತು ಸಂವಿಧಾನಕ್ಕೆ ತಿದ್ದುಪಡಿ ತರಬಹುದು, ಅದರ ಮೂಲ ಆಶಯಗಳಿಗಲ್ಲ’ ಎಂಬ ಸುಪ್ರೀಂ ಕೋರ್ಟ್ ತೀರ್ಪಿಗೆ ಆಕ್ಷೇಪಿಸಿ ರಾಜ್ಯಸಭೆ ಅಧ್ಯಕ್ಷ ಜಗದೀಪ್ ಧನಕರ್ ನೀಡಿದ್ದ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ.

ಈ ತೀರ್ಪು ಪ್ರಶ್ನಿಸಿದ್ದ ಧನಕರ್ ಅವರು, ‘ಸುಪ್ರೀಂ ಕೋರ್ಟ್‌ನ ತೀರ್ಪು ತಪ್ಪು ಸಂಪ್ರದಾಯಕ್ಕೆ ನಾಂದಿ ಹಾಡಿದೆ, ಇದನ್ನು ತಾವು ಒಪ್ಪುವುದಿಲ್ಲ. ಸಂಸತ್ತು ಎಂದಿಗೂ ಸರ್ವೋಚ್ಚವಾದುದು’ ಎಂದು ಹೇಳಿದ್ದರು.

ಕೇಶವಾನಂದ ಭಾರತಿ ತೀರ್ಪು ಕುರಿತಂತೆ ಸುಪ್ರೀಂ ಕೋರ್ಟ್ ಈಚೆಗೆ ಮೇಲಿನಂತೆ ನಿಲುವು ವ್ಯಕ್ತಪಡಿಸಿತ್ತು. ಕಾಂಗ್ರೆಸ್ ಪಕ್ಷವು ಧನಕರ್‌ರ ಈ ಹೇಳಿಕೆಯನ್ನು ‘ನ್ಯಾಯಾಂಗದ ಮೇಲಿನ ದಾಳಿ’ ಎಂದು ವ್ಯಾಖ್ಯಾನಿಸಿದೆ.

ಕಾಂಗ್ರೆಸ್‌ನ ಜೈರಾಂ ರಮೇಶ್, ಮನೋಜ್ ತಿವಾರಿ ಹೇಳಿಕೆಯನ್ನು ಖಂಡಿಸಿದ್ದರೆ, ಪಿ.ಚಿದಂಬರಂ ಅವರು, ‘ಈ ಮೂಲಕ ಧನ್‌ಕರ್ ಅವರು ಜನತೆಗೆ ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ. ಸಂವಿಧಾನವನ್ನು ಪ್ರೀತಿಸುವ ಎಲ್ಲರೂ ಈ ಕುರಿತು ಜಾಗೃತರಾಗಿರಬೇಕು. ಸಂಸತ್ತು ಅಲ್ಲ, ಸಂವಿಧಾನವೇ ಸರ್ವೋಚ್ಛವಾದುದು’ ಎಂದು ಹೇಳಿದ್ದಾರೆ.

ಸಿಪಿಎಂ ಹಿರಿಯ ಮುಖಂಡ, ಕೇರಳದ ಮಾಜಿ ಹಣಕಾಸು ಸಚಿವ ಟಿ.ಎಂ.ಥಾಮಸ್ ಐಸ್ಯಾಕ್ ಅವರು, ಧನಕರ್ ಹೇಳಿಕೆಯು ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಧಕ್ಕೆ ತರುವ ಯತ್ನ ಎಂದು ಟೀಕಿಸಿದ್ದಾರೆ.

ಆರ್‌ಜೆಡಿ ಪಕ್ಷದ ಸಂಸದ ಮನೋಜ್ ಕೆ.ಝಾ ಅವರು, ಧನಕರ್ ಅವರ ಹೇಳಿಕೆಯು ಕೇಶವಾನಂದ ಭಾರತಿ ತೀರ್ಪಿನ ಒಟ್ಟು ಆಶಯಗಳಿಗೇ ವಿರುದ್ಧವಾದುದಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.