ನವದೆಹಲಿ: ಜುಮ್ಲಾ ಜೀವಿ, ಭ್ರಷ್ಟ, ಅದಕ್ಷ ಎಂಬಿತ್ಯಾದಿ ಪದಗಳನ್ನು 'ಅಸಂಸದೀಯ ಅಭಿವ್ಯಕ್ತಿಗಳು' ಎಂಬ ಕಿರುಹೊತ್ತಿಗೆಯಲ್ಲಿ ಸೇರಿಸಿರುವ ವಿಚಾರಕ್ಕೆ ಸಂಬಂಧಿಸಿ ತೀವ್ರ ಟೀಕೆಗಳು ವ್ಯಕ್ತಗೊಂಡ ಬೆನ್ನಲ್ಲೇ, ಅಸ್ತಿತ್ವದಲ್ಲೇ ಇಲ್ಲದ ವಿವಾದಗಳನ್ನು ಸೃಷ್ಟಿಸಲು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಯತ್ನಿಸುತ್ತಿವೆ ಎಂದು ಬಿಜೆಪಿ ಸಮರ್ಥಿಸಿಕೊಂಡಿದೆ.

ನರೇಂದ್ರ ಮೋದಿ ನೇತೃತ್ವದ ಸರ್ಕಾರದ ವಾಸ್ತವಗಳನ್ನು ವಿವರಿಸಲು ಬಳಸಲಾದ ಪದಗಳನ್ನು ಅಸಂಸದೀಯ ಅಭಿವ್ಯಕ್ತಿ ಪಟ್ಟಿಗೆ ಸೇರಿಸಲಾಗಿದೆ ಎಂದು ವಿರೋಧ ಪಕ್ಷಗಳು ಹರಿಹಾಯ್ದಿವೆ.

ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಅಸಂಸದೀಯ ಅಭಿವ್ಯಕ್ತಿಗಳು ಕಿರುಹೊತ್ತಿಗೆಗೆ ಸಂಬಂಧಿಸಿದ ವಾಸ್ತವಗಳನ್ನು ತಿಳಿಸಿದ್ದಾರೆ. ವಿರೋಧ ಪಕ್ಷಗಳು ಸೃಷ್ಟಿಸಿರುವ ಎಲ್ಲ ಭ್ರಾಂತಿಗಳಿಗೆ ಸ್ಪಷ್ಟನೆ ನೀಡಿದ್ದಾರೆ ಎಂದು ಬಿಜೆಪಿ ವಕ್ತಾರ ಸಂಬಿತ್ ಪಾತ್ರಾ ಹೇಳಿದ್ದಾರೆ.

ಯಾವುದೇ ಪದವನ್ನು ನಿಷೇಧಿಸಲಾಗಿಲ್ಲ ಎಂಬುದನ್ನು ಓಂ ಬಿರ್ಲಾ ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಕೆಲವು ನಿರ್ದಿಷ್ಟ ಪದಗಳು ಕಡತದಿಂದ ಸಂದರ್ಭಾನುಸಾರ ಕಿತ್ತು ಹಾಕಲಾಗಿದೆ ಎಂದು ಸಂಬಿತ್ ಪಾತ್ರಾ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಹಲವಾರು ವಿರೋಧ ಪಕ್ಷಗಳು ರಾಷ್ಟ್ರದ ದಾರಿ ತಪ್ಪಿಸಲು ಪ್ರಯತ್ನಿಸುತ್ತಿವೆ. ಅಸ್ತಿತ್ವದಲ್ಲೇ ಇಲ್ಲದ ವಿವಾದಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲೋಕಸಭೆ: ‘ಅಸಂಸದೀಯ ಪದ’ಗಳಿಗೆ ಆಕ್ರೋಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.