ನವದೆಹಲಿ: ಎರಡು ತಿಂಗಳ ಒಳಗಾಗಿ ₹1.48 ಕೋಟಿ ಅಭಿವೃದ್ಧಿ ಶುಲ್ಕ ಪಾವತಿಸುವಂತೆ ಸುಪ್ರೀಂ ಕೋರ್ಟ್, ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್‌ಗೆ ಆದೇಶಿಸಿದೆ.

ಸದ್ಯ ಅಲ್ಟ್ರಾ ಟೆಕ್ ಸಿಮೆಂಟ್ ಲಿಮಿಟೆಡ್ ಸ್ವಾಧೀನಪಡಿಸಿಕೊಂಡಿರುವ ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ಸಂಸ್ಥೆ ಮತ್ತು ಇತರ ಕಂಪನಿಗಳಿಗೆ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿಯು ದೊಡ್ಡಬಳ್ಳಾಪುರ ರೈಲ್ವೆ ನಿಲ್ದಾಣದ ಬಳಿ ಭೂಮಿಯನ್ನು ನೀಡಿತ್ತು.

1998ರಿಂದ ಜಾಗದ ಅಭಿವೃದ್ಧಿ ಶುಲ್ಕ, ರಸ್ತೆ ಸೆಸ್ ಸೇರಿದಂತೆ ಇನ್ನಿತರ ಶುಲ್ಕಗಳನ್ನು ಪಾವತಿಸದ ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ ಸಂಸ್ಥೆಯು ಕೋರ್ಟ್ ಮೊರೆ ಹೋಗಿತ್ತು.

1998ರಿಂದ ಇಲ್ಲಿಯವರೆಗೆ ಶೇ 6ರಷ್ಟು ಬಡ್ಡಿ ಸಮೇತ ಶುಲ್ಕವನ್ನು ಎರಡು ತಿಂಗಳ ಒಳಗಾಗಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನನಿಲ್ದಾಣ ಪ್ರದೇಶಾಭಿವೃದ್ಧಿ ಪ್ರಾಧಿಕಾರಕ್ಕೆ ಪಾವತಿಸುವಂತೆ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಆದೇಶಿಸಿದೆ.

‘ಐಟಿಸಿ ₹3.01 ಕೋಟಿ ಶುಲ್ಕ ಪಾವತಿಸಿದ್ದು, ನಿಮಗೇಕೆ ಸಾಧ್ಯವಿಲ್ಲ’ ಎಂದು ಕೋರ್ಟ್ ಪ್ರಶ್ನಿಸಿದೆ. ಕಾನೂನು ಪ್ರಕಾರ ಅಭಿವೃದ್ಧಿ ಶುಲ್ಕ, ರಸ್ತೆ ಸೆಸ್ ಹಾಗೂ ಇನ್ನಿತರ ಶುಲ್ಕಗಳನ್ನು ಪಾವತಿಸುವಂತೆ ತಾಕೀತು ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.