ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 36 ದಿನಗಳಿಂದ ಪದೇ ಪದೇ ಭಯೋತ್ಪಾದಕ ದಾಳಿಗಳು ನಡೆಯುತ್ತಿದ್ದು, ನಮ್ಮ ಭದ್ರತಾ ತಂತ್ರಗಾರಿಕೆಯಲ್ಲಿ ಬದಲಾವಣೆ ತರುವ ಅಗತ್ಯವಿದೆ. ಆದರೆ ಮೋದಿ ಸರ್ಕಾರವು ಎಲ್ಲವನ್ನೂ ವ್ಯಾವಹಾರಿಕವಾಗಿಯೇ ನೋಡುತ್ತದೆ
ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಧ್ಯಕ್ಷ
ಕಳೆದ 78 ದಿನಗಳಲ್ಲಿ ಜಮ್ಮುವಿನಲ್ಲಿ ಮಾತ್ರವೇ 11 ಉಗ್ರ ದಾಳಿಗಳು ನಡೆದಿವೆ. ಈ ಸಂದರ್ಭದಲ್ಲಿ, ‘ಮನುಷ್ಯಾತೀತರಾದ ಪ್ರಧಾನಿ’ ಮತ್ತು ಸ್ವಯಂಘೋಷಿತ ಚಾಣಕ್ಯ ಅವರ ದೊಡ್ಡ ದೊಡ್ಡ ಹೇಳಿಕೆಗಳು ಏನಾದವು ಎಂದು ಕೇಳಲೇಬೇಕು
ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ನಾಲ್ವರು ಯೋಧರು ಹುತಾತ್ಮರಾದ ವಿಷಯ ತಿಳಿದು ತೀವ್ರ ನೋವುಂಟಾಗಿದೆ. ವೀರ ಯೋಧರು ಮತ್ತು ಅವರ ಕುಟುಂಬಸ್ಥರ ತ್ಯಾಗಕ್ಕೆ ನಾವು ಎಂದಿಗೂ ಚಿರಋಣಿ
ಪ್ರಿಯಾಂಕಾ ಗಾಂಧಿ ವಾದ್ರಾ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ