ನವದೆಹಲಿ: ಎಂಟು ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) 1.59 ಲಕ್ಷಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಪೈಕಿ 11,376 (ಶೇ 7ರಷ್ಟು) ಅರ್ಜಿಗಳನ್ನು ಮಹಿಳೆಯರು ಸಲ್ಲಿಸಿದ್ದರೆ, ಉಳಿದವು ಪುರುಷರು ಸಲ್ಲಿಸಿದ ಅರ್ಜಿಗಳಾಗಿವೆ ಎಂದು ಕೇಂದ್ರ ಸಿಬ್ಬಂದಿ ಸಚಿವಾಲಯ ಮಾಹಿತಿ ನೀಡಿದೆ.

2013ರ ಏಪ್ರಿಲ್ 22ರಿಂದ 2021ರ ನವೆಂಬರ್ 12ರವರೆಗೆ ಒಟ್ಟು 1,59,107 ಅರ್ಜಿಗಳು ಆರ್ಟಿಐ ಅಡಿಯಲ್ಲಿ ಸಲ್ಲಿಕೆಯಾಗಿವೆ ಎಂದು ಸಚಿವಾಲಯ ಆರ್ಟಿಐ ಅರ್ಜಿಗೆ ಉತ್ತರಿಸಿದೆ.

ನಿವೃತ್ತ ಕಮಾಂಡರ್ ಲೋಕೇಶ್ ಕೆ. ಬಾತ್ರಾ ಅವರು ಸಲ್ಲಿಸಿದ್ದ ಆರ್ಟಿಐಗೆ ಸಚಿವಾಲಯ ಮಾಹಿತಿ ನೀಡಿದೆ.

‘ಮಾಹಿತಿ ಪಡೆಯಲು ಇರುವ ಹಕ್ಕಿನ ಬಗ್ಗೆ ಸ್ತ್ರೀಯರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂಬುದನ್ನು ಇಲಾಖೆ ನೀಡಿರುವ ದತ್ತಾಂಶಗಳು ತೋರಿಸುತ್ತವೆ’ ಎಂದು ಬಾತ್ರಾ ಪ್ರತಿಕ್ರಿಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.