ನವದೆಹಲಿ: ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರವು ಎರಡು ವರ್ಷಗಳಲ್ಲಿ ರೋಜ್‌ಗಾರ್ ಬಜಾರ್ ಪೋರ್ಟಲ್ ಮೂಲಕ 10 ಲಕ್ಷ ಮಂದಿಗೆ ಉದ್ಯೋಗ ಕಲ್ಪಿಸಿದೆ ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ. ಕೊರೊನಾ ಬಳಿಕ ದೆಹಲಿ ಜನರಿಗೆ ಈ ಪೋರ್ಟಲ್ ದೊಡ್ಡ ಪ್ರಮಾಣದ ಸಹಾಯಕನಾಗಿ ಒದಗಿ ಬಂದಿದೆ ಎಂದಿದ್ದಾರೆ.

ರೋಜ್‌ಗಾರ್ ಬಜೆಟ್‌ನಲ್ಲಿ ಸಿಎಂ ಅರವಿಂದ ಕೇಜ್ರಿವಾಲ್ ಘೋಷಣೆ ಮಾಡಿದಂತೆ 20 ಲಕ್ಷ ಉದ್ಯೋಗಗಳನ್ನು ಸೃಷ್ಟಿಗೊಳಿಸುವ ಮೂಲಕ ಭರವಸೆಯನ್ನು ಹೇಗೆ ಪೂರೈಸುತ್ತಾರೆ ಎಂಬುದನ್ನು ಶೀಘ್ರದಲ್ಲೇ ಪ್ರತಿಯೊಬ್ಬರು ನೋಡಲಿದ್ದಾರೆ ಎಂದು ಸಿಸೋಡಿಯಾ ಹೇಳಿದ್ದಾರೆ.

ಅಧಿಕೃತ ಅಂಕಿಅಂಶಗಳ ಪ್ರಕಾರ ರೋಜ್‌ಗಾರ್ ಬಜಾರ್‌ನಲ್ಲಿ 2022ರ ಜೂನ್ 30ರ ವರೆಗಿನ ಎರಡು ವರ್ಷಗಳ ಅವಧಿಯಲ್ಲಿ ಒಟ್ಟು 10,21,303 ಮಂದಿಗೆ ಉದ್ಯೋಗ ಸಿಕ್ಕಿದೆ. 19,402 ಉದ್ಯೋಗದಾತರಿಂದ ಈ ಉದ್ಯೋಗಗಳು ಸೃಷ್ಟಿಯಾಗಿವೆ. ಸುಮಾರು 15.24 ಲಕ್ಷ ಮಂದಿ ಆಕಾಂಕ್ಷಿಗಳು ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ರೋಜ್‌ಗಾರ್ ಬಜಾರ್ ಪೋರ್ಟಲ್‌ನಲ್ಲಿ ಪ್ರತಿಯೊಂದು ಸಂಖ್ಯೆಯನ್ನು ಪರಿಶೀಲನೆ ಬಳಿಕವೇ ದಾಖಲಿಸಲಾಗುತ್ತದೆ ಎಂದು ವಿವರಣೆ ನೀಡಿದ್ದಾರೆ.

ದೆಹಲಿ ಸರ್ಕಾರವು 2020ರ ಜುಲೈ 27ರಂದು ರೋಜ್‌ಗಾರ್ ಬಜಾರ್ ಪೋರ್ಟಲ್ ಅನ್ನು ಆರಂಭಿಸಿದೆ. ಮೊದಲ ಬಾರಿಗೆ ಉದ್ಯೋಗ ಹುಡುಕುತ್ತಿರುವವರಿಗೆ, ಕಾರ್ಮಿಕ ವಲಯದಲ್ಲಿ ಕೆಲಸ ಹುಡುಕುತ್ತಿರುವವರಿಗೆ ಸಹಾಯ ಮಾಡುವ ಉದ್ದೇಶದಿಂದ ಈ ಪೋರ್ಟಲ್ ಅನ್ನು ಆರಂಭಿಸಲಾಗಿದೆ.

ನಾಚಿಕೆಯಿಂದ ತಲೆ ತಗ್ಗಿಸುತ್ತೇನೆ: ನ್ಯಾಯಾಂಗದ ಸ್ಥಿತಿ ಬಗ್ಗೆ ಕಪಿಲ್ ಸಿಬಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.