ಚಂಡೀಗಢ: ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ನವಜೋತ್ ಸಿಂಗ್ ಸಿಧು ಅವರು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರನ್ನು 'ಅಣ್ಣ' ಎಂದು ಕರೆದಿದ್ದಾರೆ.

ಪಾಕಿಸ್ತಾನದ ಕರ್ತಾರ್‌ಪುರ ಯೋಜನೆಯ ಸಿಇಒ ಜತೆಗೆ ಶನಿವಾರ ಸಂವಾದ ನಡೆಸಿದ ಅವರು ಈ ಹೇಳಿಕೆ ನೀಡಿದ್ದಾರೆ.

ಪಂಜಾಬ್‌ನ ಹಲವು ಮಂತ್ರಿಗಳ ಜತೆಗೂಡಿ ಸಿಧು ಅವರು ಪಾಕಿಸ್ತಾನದ ಕರ್ತಾರ್‌ಪುರ ಸಾಹಿಬ್ ಗುರುದ್ವಾರಕ್ಕೆ ಭೇಟಿ ನೀಡಿದ್ದಾರೆ. ‘ಪಾಕಿಸ್ತಾನದ ಪ್ರಧಾನಿಯ ಮೇಲೆ ನನಗೆ ಅಪಾರ ಪ್ರೀತಿ ಇದೆ,’ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಸಿಧು ಅವರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ, ‘ಕಾಂಗ್ರೆಸ್ ಹೈಕಮಾಂಡ್ 'ಅನುಭವಿ ಅಮರಿಂದರ್ ಸಿಂಗ್‌ಗಿಂತ ಪಾಕಿಸ್ತಾನವನ್ನು ಪ್ರೀತಿಸುವ ಸಿಧು ಅವರನ್ನು ಪ್ರೀತಿಸುತ್ತಿದೆ' ಎಂದು ಟೀಕಿಸಿದ್ದಾರೆ.

‘ರಾಹುಲ್ ಗಾಂಧಿಯವರ ನೆಚ್ಚಿನ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ‘ದೊಡ್ಡಣ್ಣ (ಬಡಾ ಬಾಯ್)‘ ಎಂದು ಕರೆದಿದ್ದಾರೆ. ಕಳೆದ ಬಾರಿ ಅವರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಾಜ್ವಾ ಅವರನ್ನು ಅಪ್ಪಿಕೊಂಡಿದ್ದರು, ಪ್ರಶಂಸಿಸಿದ್ದರು,’ ಎಂದು ಮಾಳವಿಯ ಹೇಳಿದರು.

‘ರಾಹುಲ್ ಮತ್ತು ಪ್ರಿಯಾಂಕಾ ಅವರು ಅನುಭವಿ ಅಮರಿಂದರ್ ಸಿಂಗ್‌ಗಿಂತ ಪಾಕಿಸ್ತಾನವನ್ನು ಪ್ರೀತಿಸುವ ಸಿಧು ಅವರನ್ನು ಆಯ್ಕೆ ಮಾಡಿರುವುದರಲ್ಲಿ ಆಶ್ಚರ್ಯವೇನಾದರೂ ಇದೆಯೇ?‘ ಎಂದು ಮಾಳವಿಯಾ ಪ್ರಶ್ನೆ ಮಾಡಿದ್ದಾರೆ.

2018 ರಲ್ಲಿ ಇಮ್ರಾನ್ ಖಾನ್ ಅವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದ ಸಿಧು, ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಬಜ್ವಾ ಅವರನ್ನು ತಬ್ಬಿಕೊಂಡು ವಿವಾದ ಸೃಷ್ಟಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.