ಹೈದರಾಬಾದ್: ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರೇವಂತ್ ರೆಡ್ಡಿ ಅವರು ತೆಲಂಗಾಣ ರಾಜ್ಯದ ಎರಡನೆಯ ಮುಖ್ಯಮಂತ್ರಿ ಆಗಲಿದ್ದಾರೆ. 54 ವರ್ಷ ವಯಸ್ಸಿನ ರೆಡ್ಡಿ ಅವರು ರಾಜಕಾರಣದಲ್ಲಿ ಸಾಗಿಬಂದಿರುವ ಹಾದಿಯು ಸುದೀರ್ಘವಾಗಿದೆ.

2006ರಲ್ಲಿ ರೆಡ್ಡಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾದರು. 2007ರಲ್ಲಿ ವಿಧಾನ ಪರಿಷತ್ ಸದಸ್ಯ ಕೂಡ ಆದರು. ಮೆಹಬೂಬ್‌ನಗರದವರಾದ ರೆಡ್ಡಿ ಅವರು ನಂತರದಲ್ಲಿ ಟಿಡಿಪಿ ಸೇರಿದರು. ಆಗ ಅವಿಭಜಿತವಾಗಿದ್ದ ಆಂಧ್ರಪ್ರೇಶದ ವಿಧಾನಸಭೆಗೆ ಕೊಡಂಗಲ್ ಕ್ಷೇತ್ರದಿಂದ 2009ರಲ್ಲಿ ಆಯ್ಕೆಯಾದರು. 2014ರಲ್ಲಿ ಟಿಡಿಪಿಯಿಂದಲೇ ತೆಲಂಗಾಣ ವಿಧಾನಸಭೆಗೆ ಆಯ್ಕೆಯಾಗಿದ್ದರು. ರೆಡ್ಡಿ ಅವರು ವಿದ್ಯಾರ್ಥಿಯಾಗಿದ್ದಾಗ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿದ್ದರು ಕೂಡ.

ಆರ್‌ಎಸ್‌ಎಸ್‌ನ ಮುಖವಾಣಿ ‘ಜಾಗೃತಿ’ ಪತ್ರಿಕೆಗೆ ಹೈದರಾಬಾದ್‌ನಲ್ಲಿ ಕೆಲವು ಕಾಲ ಕೆಲಸ ಮಾಡಿದ್ದರು. ರೆಡ್ಡಿ ಅವರು ಆರ್‌ಎಸ್‌ಎಸ್ ಜೊತೆ ಹೊಂದಿದ್ದ ಈ ನಂಟನ್ನು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಒವೈಸಿ ಅವರು ಚುನಾವಣೆ ಸಂದರ್ಭದಲ್ಲಿ ಪ್ರಸ್ತಾಪಿಸಿದ್ದರು.

ಮುಸ್ಲಿಮರ ಮತಗಳು ಕಾಂಗ್ರೆಸ್ಸಿಗೆ ಸಿಗಬಾರದು ಎಂಬ ಉದ್ದೇಶದಿಂದ ಒವೈಸಿ ಅವರು, ‘ರೇವಂತ್ ರೆಡ್ಡಿ ಆರ್‌ಎಸ್‌ಎಸ್ ಏಜೆಂಟ್’ ಎಂದು ಕರೆದಿದ್ದರು. ಆದೆ ರೆಡ್ಡಿ ಅವರು ತಾವು ಹಿಂದೆ ಆರ್‌ಎಸ್‌ಎಸ್ ಜೊತೆ ಹೊಂದಿದ್ದ ನಂಟನ್ನು ಯಾವತ್ತೂ ಮರೆಮಾಚುವ ಯತ್ನ ನಡೆಸಲಿಲ್ಲ. ವರ್ಷಗಳು ಕಳೆದಂತೆಲ್ಲ ತಾವು ಆರ್‌ಎಸ್‌ಎಸ್ ಸಿದ್ಧಾಂತವನ್ನು ವಿರೋಧಿಸಲು ತೊಡಗಿದ್ದಾಗಿ, ಧರ್ಮನಿರಪೇಕ್ಷ ಸಂಘಟನೆಗಳ ಕಡೆ ಮುಖ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.

2015ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ, ಶಾಸಕರೊಬ್ಬರಿಗೆ ಮತಕ್ಕಾಗಿ ಲಂಚ ನೀಡುತ್ತಿದ್ದಾಗ ತೆಲಂಗಾಣ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದರು. ರೆಡ್ಡಿ ಅವರನ್ನು ಜೈಲಿಗೆ ಕಳುಹಿಸಲಾಗಿತ್ತು. ಜಾಮೀನು ಪಡೆದ ಹೊರಬಂದ ನಂತರದಲ್ಲಿ, ರೆಡ್ಡಿ ಅವರು ಮೀಸೆ ತಿರುವಿ ಕೆಸಿಆರ್ ಅವರಿಗೆ ಸವಾಲೆಸೆದಿದ್ದರು. ಈ ಹಗರಣ ನಡೆದ ಎಂಟು ವರ್ಷಗಳ ನಂತರ ರೆಡ್ಡಿ ಅವರು ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದಾರೆ.

2017ರಲ್ಲಿ ಕಾಂಗ್ರೆಸ್ ಸೇರಿದ ರೆಡ್ಡಿ, 2021ರಲ್ಲಿ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದರು. ಆಗ ಅವರಿಗೆ ಪಕ್ಷದ ಹಿರಿಯರಿಂದ ವಿರೋಧ ಎದುರಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.