ಚೆನ್ನೈ: ಮುಂದಿನ ವರ್ಷ ನಡೆಯಲಿರುವ ತಮಿಳುನಾಡು ವಿಧಾನಸಭಾ ಚುನಾವಣೆಗೆ ಈಗಿನಿಂದಲೇ ಚಟುವಟಿಕೆಗಳು ಗರಿಗೆದರಿದ್ದು, ಎಐಎಡಿಎಂಕೆನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹಾಲಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ರೇಸ್ನಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸುದ್ದಿಸಂಸ್ಥೆ ಎಎನ್ಐಗೆ ಮೂಲಗಳು ತಿಳಿಸಿರುವಂತೆ, ಸೋಮವಾರ ನಡೆದ ಎಐಎಡಿಎಂಕೆ ಪಕ್ಷದ ಕಾರ್ಯಕಾರಿ ಸಭೆಯಲ್ಲಿ ಮುಖ್ಯಮಂತ್ರಿ ಹುದ್ದೆಯ ಅಭ್ಯರ್ಥಿಯ ವಿಚಾರವೇ ಐದು ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆಯಾಗಿದೆ. ಉಪ ಮುಖ್ಯಮಂತ್ರಿ ಒ. ಪನ್ನೀರಸೆಲ್ವಂ ಕೂಡ ಸ್ಪರ್ಧೆಯಲ್ಲಿದ್ದಾರೆ.

ಈ ಕುರಿತಂತೆ ಅಕ್ಟೋಬರ್ 7 ರಂದು ಔಪಚಾರಿಕವಾಗಿ ಪ್ರಕಟಣೆ ನೀಡಲಾಗುವುದು ಎಂದು ಪಕ್ಷದ ಉಪ ಸಂಯೋಜಕ ಕೆ.ಪಿ. ಮುನುಸಾಮಿ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರಸ್ತುತ ಮುಖ್ಯಮಂತ್ರಿಯಾಗಿರುವ ಪಳನಿಸ್ವಾಮಿ ಅವರೇ ಮುಂಬರುವ ಚುನಾವಣೆಗೆ ಅಭ್ಯರ್ಥಿಯಲ್ಲದಿದ್ದರೆ ಅದು ಪಕ್ಷ ಮತ್ತು ಅದರ ಸರ್ಕಾರವನ್ನು ಅಪಹಾಸ್ಯಕ್ಕೆ ಗುರಿಯಾಗುವಂತೆ ಮಾಡುತ್ತದೆ. ಪ್ರತಿಪಕ್ಷ ಡಿಎಂಕೆಗೆ ಇದೇ ಪ್ರಮುಖ ಅಸ್ತ್ರವಾಗಲಿದೆ ಎಂಬುದೇ ಹೆಚ್ಚಾಗಿ ಚರ್ಚೆಯಾಗಿದೆ.

ಸಭೆಯಲ್ಲಿ ಹಿರಿಯ ನಾಯಕರಾದ ಎಸ್. ಸೆಮ್ಮಾಲೈ, ಪಿ. ತಂಗಮಣಿ, ಸಿ.ವಿ. ಶಣ್ಮುಗಂ ಮತ್ತು ನಾಥಮ್ ಆರ್ ವಿಶ್ವನಾಥ್ ಅವರಿಂದ ಪಳನಿಸ್ವಾಮಿ ಅವರಿಗೆ ಬೆಂಬಲ ವ್ಯಕ್ತವಾಗಿದೆ.

ಉಭಯ ಬಣಗಳವಿಲೀನಕ್ಕೆ ಮುಂಚಿತವಾಗಿ ಸ್ವತಃ ಪನ್ನೀರ್ಸೆಲ್ವಂ ಅವರನ್ನು ಬೆಂಬಲಿಸುತ್ತಿದ್ದ ಪಕ್ಷದ ಉನ್ನತ ಮೂಲವೊಂದು, ಮುಖ್ಯಮಂತ್ರಿ ಅಭ್ಯರ್ಥಿಯ ಸುತ್ತಲಿನ ಚರ್ಚೆಯನ್ನು ಈಗಲೇ ಇತ್ಯರ್ಥಪಡಿಸಬೇಕಾಗಿದೆ. ಹೆಚ್ಚಿನ ನಾಯಕರು ಈ ತೀರ್ಮಾನವನ್ನು ಬೆಂಬಲಿಸಿದ್ದು, ಸದ್ಯಕ್ಕೆ 2021ರ ವಿಧಾನಸಭೆ ಚುನಾವಣೆಗೆ ಪಳನಿಸ್ವಾಮಿ ಅವರೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿರಲಿದ್ದಾರೆ ಎಂದು ತಿಳಿಸಿದೆ.

ಅಕ್ಟೋಬರ್ 7 ರಂದು 2021ಕ್ಕೆ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಪಳನಿಸ್ವಾಮಿ ಮತ್ತು ಪನ್ನೀರ ಸೆಲ್ವಂ ಇಬ್ಬರೂ ಜಂಟಿಯಾಗಿ ಮುಖ್ಯಮಂತ್ರಿ ಅಭ್ಯರ್ಥಿಯ ಹೆಸರನ್ನು ಘೋಷಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.