ಮುಂಬೈ:ಪಾಲ್ಘರ್ ಜಿಲ್ಲೆಯ ಕಾಸಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಇಬ್ಬರು ಸಾಧು ಹಾಗೂ ಅವರ ವಾಹನ ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ, ಮೂವರು ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾ ಮಾಡಿದೆ.

ಎಎಸ್‌ಐ ಆನಂದರಾವ್ ಕಾಳೆ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ. ಪಿಎಸ್‌ಐ ರವಿ ಸಾಳುಂಕೆ ಹಾಗೂ ಕಾನ್‌ಸ್ಟೆಬಲ್ ನರೇಶ್ ಧೋಡಿ ಎಂಬುವವರಿಗೆ ಕಡ್ಡಾಯ ನಿವೃತ್ತಿ ನೀಡಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲಾಖಾ ತನಿಖೆ ನಡೆದ ನಂತರ ಈ ಮೂವರನ್ನು ಅಮಾನತುಗೊಳಿಸಲಾಗಿತ್ತು.

ಪಾಲ್ಘರ್ ಜಿಲ್ಲೆಯ ದಹಾನು ತಾಲ್ಲೂಕಿನ ಗಡ್‌ಚಿಂಚಲೆ ಗ್ರಾಮದಲ್ಲಿಏಪ್ರಿಲ್ 16ರಂದು ರಾತ್ರಿ ಕಲ್ಪವೃಕ್ಷ ಗಿರಿ ಮಹಾರಾಜ್ (70), ಸುಶೀಲ್ ಗಿರಿ ಮಹಾರಾಜ್ (35) ಹಾಗೂ ಅವರ ಚಾಲಕ ನೀಲೇಶ್ ತೇಲ್ಗಡೆ (30) ಅವರ ಮೇಲೆ 500ಕ್ಕೂ ಹೆಚ್ಚು ಜನರಿದ್ದ ಗುಂಪು ದಾಳಿ ನಡೆಸಿತ್ತು. ಭೀಕರ ಹಲ್ಲೆ ನಡೆಸಿ, ಮೂವರನ್ನೂ ಹತ್ಯೆ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.