ನವದೆಹಲಿ: ಗುಜರಾತ್ನ ಆಯುರ್ವೇದ ವೈದ್ಯಕೀಯ ಸಂಸ್ಥೆಗಳ ಕ್ಲಸ್ಟರ್ಗೆ ರಾಷ್ಟ್ರೀಯ ಪ್ರಾಮುಖ್ಯ ನೀಡುವ ‘ಆಯುರ್ವೇದ ಬೋಧನಾ ಮತ್ತು ಸಂಶೋಧನಾ ಸಂಸ್ಥೆ–2020‘ ಮಸೂದೆಗೆ ಬುಧವಾರ ರಾಜ್ಯಸಭೆ ಧ್ವನಿಮತದ ಮೂಲಕ ಅನುಮೋದನೆ ನೀಡಿತು.

ಕಳೆದ ಲೋಕಸಭೆ ಅಧಿವೇಶನದಲ್ಲಿ ಈ ಮಸೂದೆಗೆ ಅನುಮೋದನೆ ದೊರೆತಿತ್ತು. ಇದರಲ್ಲಿ ಗುಜರಾತ್ ಮೂಲದ ಮೂರು ಜಾಮ್ನಾನಗರ್ ಆಯುರ್ವೇದದಲ್ಲಿ ಸ್ನಾತಕೋತ್ತರ ಬೋಧನೆ ಮತ್ತು ಸಂಶೋಧನಾ ಸಂಸ್ಥೆ, ಗುಲಾಬ್ಕುನ್ವೆರ್ಬಾ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಯುರ್ವೇದ ಔಷಧ ವಿಜ್ಞಾನಗಳ ಸಂಸ್ಥೆಯೂ ಸೇರಿದೆ.

ಮಸೂದೆಗೆ ಅನುಮೋದನೆ ದೊರೆತ ನಂತರ ಕೆಲವು ಸದಸ್ಯರು ‘ರಾಷ್ಟ್ರೀಯ ಪ್ರಾಮುಖ್ಯಕ್ಕಾಗಿ ಗುಜರಾತ್ ಸಂಸ್ಥೆಯನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ‘ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ, ‘ಜಾಮ್ನಾನಗರದ ಸಂಸ್ಥೆಯನ್ನು ಯಾವುದೇ ಪಕ್ಷಪಾತವಿಲ್ಲದೇ ಅಥವಾ ಮನಬಂದಂತೆ ಆಯ್ಕೆ ಮಾಡಿಲ್ಲ‘ ಎಂದು ಸ್ಪಷ್ಟಪಡಿಸಿದ ಸಚಿವರು, ‘1956ರಂದು ಆರಂಭವಾದ ಈ ಸಂಸ್ಥೆ, ದೇಶದಲ್ಲೇ ಅತ್ಯಂತ ಹಿರಿಯ ಸಂಸ್ಥೆಗಳಲ್ಲಿ ಒಂದಾಗಿದೆ ಎಂಬ ಮಾನದಂಡವೂ ಸೇರಿದೆ‘ ಎಂದು ತಿಳಿಸಿದರು.

ದೇಶದಲ್ಲಿ ರಾಷ್ಟ್ರೀಯ ಪ್ರಾಮುಖ್ಯ ಸ್ಥಾನಪಡೆಯುವಂತಹ 103 ಸಂಸ್ಥೆಗಳಿವೆ, ಆದರೆ ಅದರಲ್ಲಿ ಒಂದೇ ಒಂದು ಆಯುರ್ವೇದ ಸಂಸ್ಥೆ ಇಲ್ಲ. ಜತೆಗೆ, ಇದು ವಿಶ್ವ ಆರೋಗ್ಯ ಸಂಸ್ಥೆಯ ಸಹಯೋಗದಲ್ಲಿರುವ ಅತ್ಯಂತ ಹಳೆಯದಾದ ಆಯುರ್ವೇದ ಸಂಸ್ಥೆಯಾಗಿದ್ದು, ಇಂಥ ಪ್ರಮುಖ ಸ್ಥಾನ ಪಡೆಯಲು ಪ್ರತಿ ಹಂತದಲ್ಲೂ ಯೋಗ್ಯ ಮಾನದಂಡಗಳನ್ನು ಹೊಂದಿದೆ‘ ಎಂದು ಸಚಿವರು ವಿವರಿಸಿದ್ದಾರೆ.

ಜಾಮ್ನಾನಗರದ ಈ ಸಂಸ್ಥೆ 20 ವರ್ಷಗಳಲ್ಲಿ 65 ದೇಶಗಳ ವಿದ್ಯಾರ್ಥಿಗಳೀಗೆ ತರಬೇತಿ ನೀಡಿದೆ. ಮಾತ್ರವಲ್ಲ ವಿವಿಧ ದೇಶಗಳೊಂದಿಗೆ 30 ಒಪ್ಪಂದಗಳನ್ನು ಮಾಡಿಕೊಂಡಿದೆ ಎಂದು ಸಚಿವರು ರಾಜ್ಯಸಭೆಗೆ ತಿಳಿಸಿದರು.

ಬೇರೆ ಬೇರೆ ಸಂಸ್ಥೆಗಳನ್ನು ಬೆಂಬಲಿಸಲು ರಾಷ್ಟ್ರೀಯ ಆಯುಷ್ ಮಿಷನ್. ಇದೆ. ಸಮಯ ಬಂದಾಗ ಅಂಥ ಸಂಸ್ಥೆಗಳಿಗೆ ಅಂತರರಾಷ್ಟ್ರೀಯ ಸ್ಥಾನಮಾನ ದೊರೆಯಲು ಸರ್ಕಾರ, ಆ ಸಂಸ್ಥೆಗಳನ್ನು ಬೆಂಬಲಿಸಲು ಸಿದ್ಧವಾಗಿದೆ ಎಂದು ಭರವಸೆ ನೀಡಿದರು.

'ಆತ್ಮನಿರ್ಭಾರ ಭಾರತ್' ಅಡಿಯಲ್ಲಿ ಸರ್ಕಾರವು ಔಷಧೀಯ ಸಸ್ಯಗಳನ್ನು ಬೆಳೆಸಲು ರೈತರಿಗೆ ಉತ್ತೇಜನ ನೀಡುವ ಸಲುವಾಗಿ₹4ಸಾವಿ ಕೋಟಿಯನ್ನು ಅನುಮೋದಿಸಿದೆ ಎಂದು ಅವರು ಹೇಳಿದರು.

ಉದ್ದೇಶಿತ ಜಾಮ್ನಾನಗರ ಸಂಸ್ಥೆಯಲ್ಲಿ ಆಯುಷ್ ಇಲಾಖೆ ಸಚಿವರು, ಕಾರ್ಯದರ್ಶಿ ಮತ್ತು ಗುಜರಾತ್ ರಾಜ್ಯ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಾರ್ಯದರ್ಶಿ, ರಾಜ್ಯಸಭೆ ಮತ್ತು ಲೋಕಸಭೆ ಸೇರಿ ಮೂವರು ಸಂಸದರನ್ನೊಳಗೊಂಡ ಹದಿನೈದು ಮಂದಿ ಸಮಿತಿಯನ್ನು ರಚಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.