ನವದೆಹಲಿ: ಸಂಸತ್ ಭವನದಲ್ಲಿ ನಡೆದಿದ್ದ ಭದ್ರತಾ ವೈಫಲ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿ ಮಹೇಶ್ ಕುಮಾವತ್‌ನನ್ನು ಇಂದು (ಶನಿವಾರ) ಪೊಲೀಸರು ಬಂಧಿಸಿದ್ದಾರೆ.

ಆರೋಪಿಯನ್ನು ದೆಹಲಿಯ ಪಟಿಯಾಲ ಹೌಸ್ ಕೋರ್ಟ್‌ನ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ಘಟನೆಯ ಮಾಸ್ಟರ್ ಮೈಂಡ್ ಎಂದು ಹೇಳಲಾದ ಲಲಿತ್ ಝಾ ಸೇರಿದಂತೆ ಮೈಸೂರಿನ ವಿಜಯನಗರ ನಿವಾಸಿಯಾಗಿರುವ ಎಂಜಿನಿಯರಿಂಗ್ ಪದವೀಧರ ಮನೋರಂಜನ್ ಡಿ. ಹಾಗೂ ಲಖನೌದ ಸಾಗರ್ ಶರ್ಮಾ, ಹರಿಯಾಣದ ಹಿಸಾರ್‌ನ ನೀಲಂ (42) ಮತ್ತು ಮಹಾರಾಷ್ಟ್ರದ ಲಾತೂರ್‌ನ ಅಮೋಲ್ ಶಿಂದೆ (25) ಅವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಒಳಪಡಿಸಿದ್ದಾರೆ.

ಗುರುವಾರ ರಾತ್ರಿ ಲಲಿತ್ ಝಾ ಪೊಲೀಸರಿಗೆ ಶರಣಾಗಿದ್ದಾನೆ. ಇದೇ ವೇಳೆ ಝಾ ಜೊತೆಗಿದ್ದ ಮಹೇಶ್ ಕುಮಾವತ್ ಎಂಬುವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ರಾಜಸ್ಥಾನದಲ್ಲಿ ಝಾ ಅಡಗಿಕೊಳ್ಳಲು ಮಹೇಶ್ ನೆರವಾಗಿದ್ದರು ಎಂದು ಹೇಳಲಾಗಿದೆ.

ವಿಚಾರಣೆಗೆ ಒಳಗಾಗಿರುವ ಮಹೇಶ್, ಸಂಸತ್ತಿನ ಭದ್ರತೆ ಉಲ್ಲಂಘಿಸಿದ ತಂಡದ ಜತೆ ಇರಬೇಕಿತ್ತು. ಆದರೆ, ಆತ ಅಂದು ಸ್ಥಳಕ್ಕೆ ಬರಲು ಸಾಧ್ಯವಾಗಿರಲಿಲ್ಲ ಎಂದು ಮೂಲಗಳು ಹೇಳಿವೆ.
.ಸಂಸತ್ ಭವನದ ಭದ್ರತಾ ವೈಫಲ್ಯ: ವಿಚಾರಣೆ ವೇಳೆ ರೋಚಕ ಅಂಶಗಳನ್ನು ಬಾಯ್ಬಿಟ್ಟ ಆರೋಪಿ!.ಸಂಸತ್ ಭವನದ ಭದ್ರತಾ ವೈಫಲ್ಯ: ಮಾಸ್ಟರ್ ಮೈಂಡ್ ಲಲಿತ್ ಝಾ ಬಂಧನ.Parliament Security Breach | ಸಂಸತ್ ಭವನದ ಭದ್ರತಾ ವ್ಯವಸ್ಥೆಯಲ್ಲಿ ಬದಲಾವಣೆ.ಸಂಸತ್ ಭದ್ರತಾ ಲೋಪ |ಲಲಿತ್ ಭಾಗಿಯಾಗಿದ್ದಾನೆ ಎಂದು ನಂಬಲಾಗುತ್ತಿಲ್ಲ: ಆರೋಪಿ ತಂದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.