ಪ್ರತಾಪ ಸಿಂಹ ಅವರು ಪಾಸ್ ನೀಡುವಾಗ ಎಚ್ಚರಿಕೆ ವಹಿಸಬೇಕಿತ್ತು. ಅವರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ.
ಡಿ.ಕೆ. ಸುರೇಶ್, ಬೆಂಗಳೂರು ಗ್ರಾಮಾಂತರ ಸಂಸದ
ಅಪರಿಚಿತ ವ್ಯಕ್ತಿಗಳಿಬ್ಬರು ಶೂನಲ್ಲಿ ಗ್ಯಾಸ್ ಕ್ಯಾನ್‌ಗಳನ್ನು ಅಡಗಿಸಿಟ್ಟುಕೊಂಡಿದ್ದರು. ಅದರಿಂದ ಹಳದಿ ಬಣ್ಣದ ಹೊಗೆ ಸಿಂಪಡಿಸಿದರು. ಒಬ್ಬ ಆರೋಪಿ ಸರ್ವಾಧಿಕಾರಿ ಆಡಳಿತ ನಡೆಯುವುದಿಲ್ಲ ಎಂದು ಘೋಷಣೆ ಕೂಗಿದ್ದಾನೆ.
ರಾಮಪ್ರೀತ್ ಮಂಡಲ್, ಜೆಡಿಯು ಸಂಸದ
ಇಬ್ಬರು ಯುವಕರು ಹಳದಿ ಬಣ್ಣದ ಅನಿಲವನ್ನು ಸಿಂಪಡಿಸಿದರು. ಅದು ದುರ್ವಾಸನೆ ಬೀರುತ್ತಿತ್ತು. ಸಂಸದರು ಅವರನ್ನು ಹಿಡಿಯಲು ಧಾವಿಸಿದರು. ಒಬ್ಬ ವ್ಯಕ್ತಿ ಕೆಲವು ಘೋಷಣೆಗಳನ್ನು ಕೂಗಿದ. ಇದು ಹೊಸ ಸಂಸತ್ ಭವನದ ಭದ್ರತೆ ಕುರಿತು ಗಂಭೀರ ಪ್ರಶ್ನೆಗಳನ್ನು ಎತ್ತಿದೆ.
ಗೌರವ್ ಗೊಗೋಯ್, ಕಾಂಗ್ರೆಸ್ ಸಂಸದ
ಸಾಗರ್ ಎಂಬಾತ ಸಂಸದ ಪ್ರತಾಪ ಸಿಂಹ ಪಾಸ್ ಮೇಲೆ ಪ್ರವೇಶ ಪಡೆದಿದ್ದ. ಇದೊಂದು ದೊಡ್ಡ ಭದ್ರತಾ ಲೋಪ. ಸಂಸತ್ ಭವನದ ಮೇಲಿನ ದಾಳಿ ನಡೆದ ದಿನವೇ ಈ ಲೋಪ ಆಗಿದೆ. ಈ ಬಗ್ಗೆ ತನಿಖೆ ನಡೆಯಬೇಕು.
ಡ್ಯಾನಿಶ್ ಅಲಿ, ಬಿಎಸ್‌ಪಿಯಿಂದ ಅಮಾನತಾದ ಸಂಸದ
ಗೃಹ ಸಚಿವ ಅಮಿತ್ ಶಾ ಅವರು ದೊಡ್ಡದಾಗಿ ಭಾಷಣಗಳನ್ನು ಬಿಗಿಯುತ್ತಾರೆ. ಆದರೆ, ಅವರಿಗೆ ಸಂಸತ್ತಿನಲ್ಲಿ ಭದ್ರತೆಯನ್ನು ಕಾಪಾಡಲು ಸಾಧ್ಯವಾಗಿಲ್ಲ. ಅವರು ಕೂಡಲೇ ರಾಜೀನಾಮೆ ನೀಡಬೇಕು.
ಕಲ್ಯಾಣ್ ಬ್ಯಾನರ್ಜಿ, ಟಿಎಂಸಿ ಸಂಸದ
ಸದನದಲ್ಲಿ ಇದ್ದಕ್ಕಿದ್ದಂತೆ ಗೊಂದಲ ವಾತಾವರಣ ನಿರ್ಮಾಣವಾಯಿತು. ಒಬ್ಬ ವ್ಯಕ್ತಿ ಒಂದು ಬೆಂಚ್‌ನಿಂದ ಮತ್ತೊಂದಕ್ಕೆ ಜಿಗಿಯುತ್ತಿರುವುದನ್ನು ಗಮನಿಸಿದೆವು. ಅದು ಅತ್ಯಂತ ಗಾಬರಿಯ ಕ್ಷಣವಾಗಿತ್ತು. ಏನು ಬೇಕಾದರೂ ಆಗಬಹುದಿತ್ತು. ಒಂದು ಪಕ್ಷ ಅವನು ತನ್ನ ಪಾಕೆಟ್‌ನಲ್ಲಿ ಬಾಂಬ್ ಅಥವಾ ಬೆಂಕಿ ಹಚ್ಚುವ ಸಾಧನಗಳನ್ನು ಇಟ್ಟುಕೊಂಡಿದ್ದರೆ ಗತಿಯೇನು?