ನವದೆಹಲಿ: ಚಳಿಗಾಲದ ಅಧಿವೇಶನದ 11ನೇ ದಿನವಾದ ಸೋಮವಾರ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಹೈದರಾಬಾದ್‌ನಪಶುವೈದ್ಯೆಯ ಮೇಲೆ ನಡೆದಅತ್ಯಾಚಾರ ಪ್ರಕರಣ ಚರ್ಚೆಯಾಗಿದೆ.

ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳ ಬಗ್ಗೆ ಚರ್ಚಿಸಲು ಸರ್ಕಾರ ಸಿದ್ಧವಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಪಶುವೈದ್ಯೆಯಅತ್ಯಾಚಾರ ಪ್ರಕರಣ ಉಲ್ಲೇಖಿಸಿ ಮಾತನಾಡಿದ ಅವರು, ಈ ಪ್ರಕರಣ ಇಡೀ ದೇಶವೇ ಅವಮಾನಿತವಾಗುವಂತೆ ಮಾಡಿದೆ. ಇದರಿಂದ ಎಲ್ಲರಿಗೂ ನೋವಾಗಿದೆ. ಇಂತಹ ಕೃತ್ಯವೆಸಗಿದ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಬೇಕು ಎಂದಿದ್ದಾರೆ.

ರೇಪಿಸ್ಟ್‌ಗಳನ್ನು ಜನರ ಮುಂದೆ ತಂದು ಥಳಿಸಿ ಕೊಲ್ಲಬೇಕು ಎಂದು ಸಂಸದೆ ಜಯಾ ಬಚ್ಚನ್ ರಾಜ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ರಾಜ್ಯಸಭಾ ಸಭಾಪತಿ ವೆಂಕ್ಯನಾಯ್ಡು ಕೂಡಾ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಖಂಡಿಸಿದ್ದಾರೆ.

ಇದನ್ನೂ ಓದಿ:ರೇಪಿಸ್ಟ್‌ಗಳನ್ನು ಜನರ ಮುಂದೆ ತಂದು ಥಳಿಸಿ ಕೊಲ್ಲಬೇಕು: ಸಂಸದೆ ಜಯಾ ಬಚ್ಚನ್

ಯಾವೊಬ್ಬ ಜನಪ್ರತಿನಿಧಿ ಅಥವಾ ಸರ್ಕಾರ ತಮ್ಮ ರಾಜ್ಯದಲ್ಲಿ ಈ ರೀತಿಯ ಕೃತ್ಯ ನಡೆಯಲಿ ಎಂದು ಬಯಸುವುದಿಲ್ಲ ಎಂದು ಕಾಂಗ್ರೆಸ್‌ನ ಹಿರಿಯ ನೇತಾರ ಗುಲಾಂ ನಬಿ ಆಜಾದ್ ಹೇಳಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಇಂಥಾ ಘಟನೆಗಳ ಬಗ್ಗೆ ಬೇಸರವಾಗುತ್ತಿದೆ ಎಂದು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.

ಮಕ್ಕಳು ಮತ್ತು ಮಹಿಳೆಯರು ಸುರಕ್ಷಿತರಲ್ಲ
ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿರುವ ನಾಲ್ವರು ದುಷ್ಕರ್ಮಿಗಳಿಗೆ ಡಿಸೆಂಬರ್ 31ರೊಳಗೆ ನೇಣಿಗೇರಿಸುವುದಕ್ಕಾಗಿ ಫಾಸ್ಟ್ ಟ್ರಾಕ್ ನ್ಯಾಯಾಲಯ ಸಿದ್ಧಪಡಿಸಬೇಕು ಎಂದು ಎಐಎಡಿಎಂಕೆ ಸಂಸದೆ ವಿಜಿಲಾ ಸತ್ಯನಾಥ್ ಒತ್ತಾಯಿಸಿದ್ದಾರೆ.

ಇದನ್ನೂ ಓದಿ:ಪಶು ವೈದ್ಯೆ ಮೇಲೆ ಅತ್ಯಾಚಾರ, ಬೆಂಕಿ ಹಚ್ಚಿ ಕೊಲೆ: ವ್ಯಾಪಕ ಆಕ್ರೋಶ

ಲೋಕಸಭೆಯಲ್ಲಿ ಇಂದು ಚರ್ಚೆಯಾಗಿದ್ದು
ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ನಲ್ಲಿ ಠೇವಣಿ ಹೊಂದಿರುವ ಶೇ. 78 ಖಾತೆದಾರರರಿಗೆ ಅವರ ಖಾತೆಯಲ್ಲಿರುವ ಪೂರ್ತಿ ಹಣ ವಿತ್‌ಡ್ರಾ ಮಾಡಲು ಅವಕಾಶ ನೀಡಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಲೋಕಸಭೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.