ಪಾಟ್ನಾ: ಉಗ್ರ ಸಂಘಟನೆಗಳ ಜತೆ ನಂಟು ಹೊಂದಿರುವ ಆರೋಪದ ಮೇಲೆ ಬಿಹಾರದ ಪಾಟ್ನಾದಲ್ಲಿ ಐವರನ್ನುಬುಧವಾರಬಂಧಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಹತ್ಯೆಗೆ ಈ ಐವರು ಸಂಚು ರೂಪಿಸಿದ್ದರು ಎಂಬ ಸಂಗತಿ ತನಿಖೆಯಿಂದ ಬಹಿರಂಗಗೊಂಡಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಸಂಘಟನೆಯ ಜತೆ ನಂಟು ಹೊಂದಿದ್ದು, ದೇಶ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪದಲ್ಲಿ ಪಾಟ್ನಾದ ಪುಲ್ವಾರಿ ಶರೀಫ್ ಪ್ರದೇಶದಲ್ಲಿ ಬುಧವಾರ ಮಾಜಿ ಪೊಲೀಸ್ ಅಧಿಕಾರಿ ಮೊಹಮ್ಮದ್ ಜಲಾವುದ್ದೀನ್ ಮತ್ತು ಅಥರ್ ಪರ್ವೇಜ್‌ನನ್ನು ಬಂಧಿಸಲಾಗಿತ್ತು.

ಅದಾದ ಬಳಿಕ, ಮರ್ಗೂಬ್ ಡ್ಯಾನಿಷ್, ಅರ್ಮಾನ್ ಮಲಿಕ್ ಮತ್ತು ಶಬೀರ್ ಎಂಬುವವರ ಬಂಧನವಾಗಿತ್ತು.

‘ಮಿಶನ್ 2047‘ ಹೆಸರಿನಲ್ಲಿ ಪಿಎಫ್‌ಐ ಸಂಘಟನೆ ಉಗ್ರದಾಳಿ ನಡೆಸಲು ಸಂಚು ರೂಪಿಸಿತ್ತು ಎಂದು ತನಿಖಾ ಸಂಸ್ಥೆ ಹೇಳಿದೆ. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ.

ಉಗ್ರ ನಂಟು ಹೊಂದಿದ ಆರೋಪ: ನಿವೃತ್ತ ಪೊಲೀಸ್ ಅಧಿಕಾರಿ ಸೇರಿ ಇಬ್ಬರ ಬಂಧನ

ಮುಸ್ಲಿಂ ಯುವಕರನ್ನು ದಾರಿ ತಪ್ಪಿಸಿ, ಉಗ್ರ ಕೃತ್ಯಕ್ಕೆ ಬಳಸಿಕೊಳ್ಳುವುದು ಮತ್ತು ತರಬೇತಿ ನೀಡುವುದನ್ನು ಈ ಸಂಘಟನೆಯ ಮೂಲಕ ಮಾಡಲಾಗುತ್ತಿತ್ತು. ಹೀಗಾಗಿ ವಿವಿಧ ಆಯಾಮದಲ್ಲಿ ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಪೊಲೀಸರ ದಾಳಿ: 2047ಕ್ಕೆ ಭಾರತವನ್ನು ಇಸ್ಲಾಂ ದೇಶವಾಗಿಸುವ ಪಿಎಫ್‌ಐ ದಾಖಲೆ ಪತ್ತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.