ನವದೆಹಲಿ: ‘ಮಕ್ಕಳ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತಮಿಳುನಾಡಿನ ತಂಜಾವೂರಿನ ನಿವಾಸಿ, 35 ವರ್ಷದ ಪಿಎಚ್‌ಡಿ ಸಂಶೋಧನಾರ್ಥಿಯೊಬ್ಬನನ್ನು ಸಿಬಿಐ ಬಂಧಿಸಿದೆ’ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಸಂಬಂಧಿಸಿದ ಚಿತ್ರಗಳು ಹಾಗೂ ವಿಡಿಯೊಗಳ ಸೃಷ್ಟಿ ಹಾಗೂ ಅವುಗಳನ್ನು ಹಂಚಿಕೊಂಡ ಆರೋಪದ ಮೇಲೆ ಸಿಬಿಐ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿತ್ತು’ ಎಂದು ಅವರು ಹೇಳಿದರು.

‘ಇಂಟರ್‌ಪೋಲ್‌ನ ದತ್ತಾಂಶ ಸಂಗ್ರಹಣೆಯಿಂದ ಈ ಚಿತ್ರಗಳು ಹಾಗೂ ವಿಡಿಯೊಗಳು ಸಿಬಿಐಗೆ ದೊರಕಿದ್ದವು. ಡಿಜಿಟಲ್ ವಿಧಿವಿಜ್ಞಾನ ಉಪಕರಣಗಳನ್ನು ಬಳಸಿಕೊಂಡು ನಡೆಸಿದ ತನಿಖೆಯಿಂದ ತಂಜಾವೂರಿನಲ್ಲಿ ಈ ಘಟನೆ ನಡೆದಿರುವುದು ತಿಳಿದುಬಂದಿದೆ’ ಎಂದರು.

‘ಬಳಿಕ, ಆರೋಪಿಗೆ ಸಂಬಂಧಿಸಿದ ಜಾಗಗಳಲ್ಲಿ ಶೋಧ ನಡೆಸಿ, ಕೃತ್ಯಕ್ಕೆ ಬಳಸಲಾದ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.