ನವದೆಹಲಿ: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿರವರು ಸೋಮವಾರ ಟ್ವೀಟ್ ಮೂಲಕ ಗೌರವ ನಮನ ಸಲ್ಲಿಸಿದ್ದಾರೆ.

ವಸಾಹತುಶಾಹಿ ಆಳ್ವಿಕೆಯಲ್ಲಿ ಬೋಸ್ ಪ್ರತಿರೋಧಿಸಿದ ರೀತಿಯನ್ನು ಮೋದಿ ಸ್ಮರಿಸಿದ್ದಾರೆ. ‘ಇಂದು, ಪರಾಕ್ರಮ್ ದಿವಸ್ನಲ್ಲಿ, ನಾನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಗೌರವ ಸಲ್ಲಿಸುತ್ತೇನೆ. ಭಾರತದ ಇತಿಹಾಸಕ್ಕೆ ಅವರ ಅಪ್ರತಿಮ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತೇನೆ’ ಎಂದಿದ್ದಾರೆ.

’ಬೋಸ್ರವರ ಆಲೋಚನೆಗಳಿಂದ ನಾನು ಆಳವಾಗಿ ಪ್ರಭಾವಿತರಾಗಿದ್ದೇನೆ. ನಾವು, ಅವರ ಕನಸಿನ ಭಾರತವನ್ನು ಸಾಕಾರಗೊಳಿಸಲು ಕೆಲಸ ಮಾಡುತ್ತಿದ್ದೇವೆ’ ಎಂದು ಮೋದಿ ಟ್ವಿಟ್ವರ್ನಲ್ಲಿ ತಿಳಿಸಿದ್ದಾರೆ.

ಆಜಾದ್ ಹಿಂದ್ ಫೌಜ್ ಸೇನೆ ಸಂಸ್ಥಾಪಕ ಬೋಸ್ರವರ ಜನ್ಮದಿನದ ನೆನಪಿಗಾಗಿ ಮೋದಿ ಸರ್ಕಾರವು 2021 ರಲ್ಲಿ ಜನವರಿ 23ರನ್ನು 'ಪರಾಕ್ರಮ್ ದಿವಸ್' ಎಂದು ಘೋಷಿಸಿದರು.

ಇದನ್ನು ಓದಿ: ಭಾರತ್ ಜೋಡೊ ಯಾತ್ರೆ ಸಮಾರೋಪ: ಶ್ರೀನಗರದಲ್ಲಿ ರಾಹುಲ್ ಅವರಿಂದ ಧ್ವಜಾರೋಹಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.