ನವದೆಹಲಿ: 2035ರ ವೇಳೆ ಬಂದರು ಯೋಜನೆಗಳಲ್ಲಿ ₹8,200 ಕೋಟಿ ಡಾಲರ್ ಹೂಡಿಕೆ ಮಾಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಸಾಗರ ಮೂಲದಿಂದ ಶುದ್ಧ ನವೀಕರಿಸಬಹುದಾದ ಇಂಧನದ ಪಾಲು ಹೆಚ್ಚಿಸುವುದು, ಜಲಮಾರ್ಗಗಳನ್ನು ಅಭಿವೃದ್ಧಿಪಡಿಸುವುದು, ದೀಪಸ್ತಂಭಗಳ ಸುತ್ತಲಿನ ಪ್ರದೇಶಗಳಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ಬಂದರು ಅಭಿವೃದ್ಧಿ ಯೋಜನೆಗಳಲ್ಲಿ ಒಳಗೊಳ್ಳಲಿವೆ ಎಂದು ಅವರು ಹೇಳಿದ್ದಾರೆ.

ಓದಿ:ವಿದ್ಯುತ್ ಗ್ರಿಡ್ ಮೇಲೆ ಚೀನಾ ದಾಳಿ: ಭಾರತದ ಪರ ನಿಲ್ಲಲು ಅಮೆರಿಕ ಸಂಸದರ ಒತ್ತಾಯ

ಭಾರತೀಯ ಸಾಗರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ಭಾರತದ ಬಂದರುಗಳು, ಹಡಗುಗಟ್ಟೆಗಳು ಹಾಗೂ ಜಲಮಾರ್ಗಗಳಲ್ಲಿ ಹೂಡಿಕೆ ಮಾಡುವಂತೆ ಜಾಗತಿಕ ಉದ್ಯಮಿಗಳಿಗೆ ಕರೆ ನೀಡಿದ್ದಾರೆ.

ಸಾಗರಮಾಲಾ ಯೋಜನೆಯಡಿ 2015ರಿಂದ 2035ರ ಅವಧಿಯಲ್ಲಿ ₹8,200 ಕೋಟಿ ಡಾಲರ್ ವೆಚ್ಚದಲ್ಲಿ 574ಕ್ಕಿಂತಲೂ ಹೆಚ್ಚು ಯೋಜನೆಗಳನ್ನು ಗುರುತಿಸಲಾಗಿದೆ ಎಂದು ಅವರು ಹೇಳಿದ್ದಾರೆ.

2030ರ ಒಳಗಾಗಿ 23 ಜಲಮಾರ್ಗಗಳನ್ನು ಕಾರ್ಯಾಚರಣೆಗೆ ಸಿದ್ಧಗೊಳಿಸುವುದನ್ನು ಸರ್ಕಾರ ಎದುರುನೋಡುತ್ತಿದೆ. ಹಿಂದೆಂದೂ ಕಂಡಿರದ ಮಟ್ಟದಲ್ಲಿ ನಮ್ಮ ಸರ್ಕಾರವು ಜಲಮಾರ್ಗಗಳ ಮೇಲೆ ಹೂಡಿಕೆ ಮಾಡುತ್ತಿದೆ. ಸರಕುಗಳ ಸಾಗಣೆಗೆ ದೇಶೀಯ ಜಲಮಾರ್ಗಗಳು ಉತ್ತಮ ಎಂಬುದನ್ನು ಕಂಡುಕೊಳ್ಳಲಾಗಿದೆ. ಇದಕ್ಕೆ ವೆಚ್ಚವೂ ಕಡಿಮೆಯಾಗಿದ್ದು, ಪರಿಸರಸ್ನೇಹಿಯಾಗಿದೆ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.