ಅಯೋಧ್ಯೆ: ರಾಮಮಂದಿರದಲ್ಲಿ ಶ್ರೀರಾಮನ ನೂತನ ವಿಗ್ರಹ ಪ್ರತಿಷ್ಠಾಪನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ದೇವಾಲಯದ ಟ್ರಸ್ಟ್ ಅಧಿಕಾರಿಯೊಬ್ಬರು ತಿಳಿಸಿದರು.

ಟ್ರಸ್ಟ್ ಸದಸ್ಯರ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮಂದಿರದ ಗರ್ಭಗುಡಿಯಲ್ಲಿ ವಿಗ್ರಹದ ಪ್ರತಿಷ್ಠಾಪನೆಗೆ ಇನ್ನು ಯಾವುದೇ ದಿನಾಂಕ ನಿಗದಿಯಾಗಿಲ್ಲ ಎಂದೂ ರಾಮಮಂದಿರ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದರು.

‘ತಾವು ಆಗಮಿಸಲು ಅನುಕೂಲವಾಗುವಂತಹ ಸಮಯ ತಿಳಿಸುವಂತೆ ಪ್ರಧಾನಿಯವರಿಗೆ ಪತ್ರ ಕಳುಹಿಸಲಾಗುತ್ತಿದೆ. 2024ರ ಡಿಸೆಂಬರ್ 26ರ ನಡುವೆ ಯಾವುದಾದರೊಂದು ಅನುಕೂಲಕರ ದಿನಾಂಕಕ್ಕೆ ತಮ್ಮ ಅನುಮತಿ ನೀಡುವಂತೆ ಪತ್ರದಲ್ಲಿ ಅವರನ್ನು ಕೋರಲಾಗುತ್ತಿದೆ. ಈ ಪತ್ರಕ್ಕೆ ಶ್ರೀರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಮಹಾಂತ ನೃತ್ಯ ಗೋಪಾಲ್ ದಾಸ್ ಕೂಡ ಸಹಿ ಹಾಕಿದ್ದಾರೆ’ ಎಂದು ಅವರು ತಿಳಿಸಿದರು.

ದೇವಾಲಯದ ನೆಲ ಮಹಡಿಯನ್ನು ಅಕ್ಟೋಬರ್ ವೇಳೆಗೆ ಕಾರ್ಯಾಚರಣೆಗೆ ಸಿದ್ಧಗೊಳಿಸಲಾಗುವುದು. ಎರಡು ತಿಂಗಳು ಪ್ರಾಯೋಗಿಕ ಕಾರ್ಯನಿರ್ವಹಣೆ ನಡೆಯಲಿದೆ. ನಂತರ, ಡಿಸೆಂಬರ್ ವೇಳೆಗೆ ನೆಲ ಮಹಡಿಯ ಪ್ರವೇಶವನ್ನು ಭಕ್ತರಿಗೆ ತೆರೆಯಲಾಗುವುದು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.