ನವದೆಹಲಿ: ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಈ ವರ್ಷದ ಮುಖ್ಯ ಕಾರ್ಯಕ್ರಮವು ಶ್ರೀನಗರದ ಶೇರ್–ಇ–ಕಾಶ್ಮೀರ್ ಅಂತರರಾಷ್ಟ್ರೀಯ ಸಮ್ಮೇಳನ ಕೇಂದ್ರದಲ್ಲಿ ಶುಕ್ರವಾರ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಈ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ ಎಂದು ಆಯುಷ್ ಖಾತೆ ರಾಜ್ಯ ಸಚಿವ (ಸ್ವತಂತ್ರ) ಪ್ರತಾಪರಾವ್ ಜಾಧವ್ ಮಂಗಳವಾರ ತಿಳಿಸಿದರು.

ಈ ವರ್ಷದ ಯೋಗ ದಿನಾಚರಣೆಯು ‘ಸ್ವಂತಕ್ಕೆ ಹಾಗೂ ಸಮಾಜಕ್ಕೆ ಯೋಗ’ ಎಂಬ ವಿಷಯವನ್ನು ಕೇಂದ್ರೀಕರಿಸಿಕೊಂಡಿರುತ್ತದೆ. ಇದು ವ್ಯಕ್ತಿಗೆ ಹಾಗೂ ಸಮಾಜಕ್ಕೆ ಒಳಿತನ್ನು ಮಾಡುವಲ್ಲಿ ಯೋಗದ ಪಾತ್ರದ ಬಗ್ಗೆ ಒತ್ತು ನೀಡಲಿದೆ ಎಂದು ಸಚಿವರು ಹೇಳಿದ್ದಾರೆ.

‘ಯೋಗವು ದೈಹಿಕ, ಮಾನಸಿಕ ಹಾಗೂ ಆಧ್ಯಾತ್ಮಿಕ ಬೆಳವಣಿಗೆಗೆ ಪೂರಕ. ಇದರ ಜೊತೆಯಲ್ಲೇ ಯೋಗವು ಸಾಮಾಜಿಕ ಸೌಹಾರ್ದವನ್ನು ಕೂಡ ಉತ್ತೇಜಿಸುತ್ತದೆ. ಈಚಿನ ವರ್ಷಗಳಲ್ಲಿ ಲಕ್ಷಾಂತರ ಮಂದಿ ಯೋಗ ದಿನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಯೋಗವು ಸಮುದಾಯಗಳ ಮೇಲೆ ಬೀರಿರುವ ಆಳವಾದ ಪ್ರಭಾವವನ್ನು ತೋರಿಸುತ್ತದೆ’ ಎಂದು ಅವರು ಹೇಳಿದ್ದಾರೆ.

ದೃಷ್ಟಿದೋಷ ಇರುವವರು ಯೋಗವನ್ನು ಕಲಿಯಲು ಅನುಕೂಲ ಮಾಡಿಕೊಡುವ, ಬ್ರೈಲ್ ಲಿಪಿಯಲ್ಲಿ ಇರುವ ‘ಕಾಮನ್ ಯೋಗಾ ಪ್ರೊಟೊಕಾಲ್’ ಪುಸ್ತಕವನ್ನು ಹಾಗೂ ಮಕ್ಕಳಲ್ಲಿ ಯೋಗದ ಬಗ್ಗೆ ಆಸಕ್ತಿ ಮೂಡಿಸುವ ‘ಪ್ರೊಫೆಸರ್ ಆಯುಷ್ಮಾನ್’ ಕಾಮಿಕ್ ಪುಸ್ತಕವನ್ನು ಜಾಧವ್ ಅವರು ಬಿಡುಗಡೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.