ನವದೆಹಲಿ: ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸಲು ಒಗ್ಗೂಡಿ ಕೆಲಸ ಮಾಡುವ ತಮ್ಮ ಬದ್ಧತೆಯನ್ನು ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪುನರುಚ್ಚರಿಸಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಗುರುವಾರ ಹೇಳಿದೆ.

ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ ಅವರಿಗೆ ಮೋದಿ ಅವರು ಬುಧವಾರ ದೂರವಾಣಿ ಕರೆಮಾಡಿ ಅಭಿನಂದಿಸಿದ್ದರು. ಗುರುವಾರ ಈ ಬಗ್ಗೆ ಪ್ರಕಟಣೆ ಹೊರಡಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ‘ನಿಮ್ಮ ನಾಯಕತ್ವದ ಮೇಲೆ ಅಮೆರಿಕದ ಜನರು ಇಟ್ಟಿರುವ ದೃಢ ನಂಬಿಕೆಯನ್ನು ಈ ಅದ್ಭುತ ಗೆಲುವು ತೋರಿಸಿಕೊಟ್ಟಿದೆ’ ಎಂದು ಸಂಭಾಷಣೆ ವೇಳೆ ಮೋದಿ ಅವರು ಟ್ರಂಪ್ಗೆ ಹೇಳಿದ್ದಾರೆ ಎಂದಿದೆ.

‘ತಂತ್ರಜ್ಞಾನ, ರಕ್ಷಣೆ, ಇಂಧನ, ಬಾಹ್ಯಾಕಾಶ ಒಳಗೊಂಡಂತೆ ಹಲವು ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲಪಡಿಸಲು ಒಟ್ಟಾಗಿ ಕೆಲಸ ಮಾಡಲು ಬದ್ಧರಿರುವುದಾಗಿ ಇಬ್ಬರೂ ನಾಯಕರು ಪುನರುಚ್ಚರಿಸಿದರು’ ಎಂದು ತಿಳಿಸಿದೆ.

‘ಗೆಳೆಯ’ ಟ್ರಂಪ್ ಅವರಿಗೆ ಕರೆಮಾಡಿ ಮಾತನಾಡಿದೆ ಎಂದು ಮೋದಿ ಅವರು ಬುಧವಾರ ರಾತ್ರಿ ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.