ಹೈದರಾಬಾದ್: ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ರಾಜ್ಯದ ಅಭಿವೃದ್ಧಿಯನ್ನು ಮರೆದು ತಮ್ಮ ಕುಟುಂಬದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಭಾನುವಾರ ಆಂಧ್ರ ಪ್ರದೇಶಕ್ಕೆ ಭೇಟಿ ನೀಡಿದ ಮೋದಿ, ಆಂಧ್ರದಲ್ಲಿ ಶ್ರೇಯಾಭಿವೃದ್ಧಿಮಾಡುವುದಾಗಿ ಚಂದ್ರ ಬಾಬು ನಾಯ್ಡು ಭರವಸೆ ನೀಡಿದ್ದರು. ಆದರೆ ಅವರು ಈಗ ತಮ್ಮ ಮಗನಿಗೆ ಪ್ರೋತ್ಸಾಹ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ.ಅಭಿವೃದ್ಧಿ ಕಾರ್ಯದಲ್ಲಿ ಅವರು ಯೂ ಟರ್ನ್ ತೆಗೆದುಕೊಂಡಿದ್ದಾರೆ ಎಂದಿದ್ದಾರೆ.

ಆಂಧ್ರ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೇ ಇರುವುದಕ್ಕೆ ಚಂದ್ರಬಾಬು ನಾಯ್ಡು ಕಳೆದ ವರ್ಷ ಎನ್ಡಿಎ ಸರ್ಕಾರದಿಂದ ಟಿಡಿಪಿ ಬೆಂಬಲ ವಾಪಸ್ ಪಡೆದಿದ್ದರು.

ತಾನು ಮೋದಿಗಿಂತ ಹಿರಿಯವನಾಗಿದ್ದರೂ ಮೋದಿಯ ಅಹಂ ಸಂತೃಪ್ತಿ ಪಡಿಸುವುದಕ್ಕಾಗಿ ನಾನುಅವರನ್ನು ಸರ್ ಎಂದು ಕರೆಯಬೇಕಾಗಿತ್ತು ಎಂದು ನಾಯ್ಡು ಹೇಳಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಮೋದಿ, ಟಿಡಿಪಿ ಮುಖ್ಯಸ್ಥ ಹಲವು ವಿಷಯಗಳಲ್ಲಿ ನನ್ನಿಂದ ಹಿರಿಯರು ಎಂಬುದರಲ್ಲಿ ಮಾತೆರಡಿಲ್ಲ ಎಂದಿದ್ದಾರೆ.

ಚಂದ್ರಬಾಬು ನಾಯ್ಡು ಪಕ್ಷಾಂತರ ಮಾಡುವುದರಲ್ಲಿ ಹಿರಿಯರು.ಅವರ ಮಾವ ಎನ್.ಟಿ ರಾಮರಾವ್ ಅವರನ್ನು ಮೋಸ ಮಾಡುವುದರಲ್ಲಿ ಅವರು ಹಿರಿಯರು. ಕೆಲವು ಹೊತ್ತಲ್ಲಿ ಕೆಲವರನ್ನು ಹೊಗಳಿ, ಮರುಕ್ಷಣದಲ್ಲಿಯೇ ತೆಗಳುವುದರಲ್ಲಿ ಅವರು ಹಿರಿಯರು ಎಂದು ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮೋದಿಯವರು ಆಂಧ್ರಕ್ಕೆ ಆಗಮಿಸಿದಾಗ ಶಿಷ್ಟಾಚಾರವನ್ನು ಕಡೆಗಣಿಸಿದ ಮುಖ್ಯಮಂತ್ರಿ ನಾಯ್ಡು ವಿಜಯವಾಡದ ಗುನ್ನಾವರಂ ವಿಮಾನ ನಿಲ್ದಾಣದಲ್ಲಿ ಪ್ರಧಾನಿಯವರನ್ನು ಸ್ವಾಗತಿಸಲು ಹೋಗಲಿಲ್ಲ.ರಾಜ್ಯಪಾಲ ಇಎಸ್ಎಲ್ ನರಸಿಂಹನ್ ಅವರು ಮೋದಿಯನ್ನು ವಿಮಾನ ನಿಲ್ದಾಣದಲ್ಲಿ ಬರ ಮಾಡಿಕೊಂಡಿದ್ದರು.

ನಾಯ್ಡು ಅವರು ವಿರೋಧ ಪಕ್ಷಗಳ ಒಕ್ಕೂಟವೊಂದನ್ನು ರಚಿಸಲು ಯತ್ನಿಸುತ್ತಿದ್ದಾರೆ. ಅದೊಂದು ಅಪವಿತ್ರ ಮೈತ್ರಿ. ಎನ್ಟಿಆರ್ ಕಾಂಗ್ರೆಸ್ ಮುಕ್ತ ಭಾರತಕ್ಕಾಗಿ ಹೋರಾಡಿದ್ದರು. ಆದರೆ ನಾಯ್ಡು ಕಾಂಗ್ರೆಸ್ಗೆ ತನ್ನನ್ನು ತಾನೇ ಅರ್ಪಿಸಿಕೊಂಡಿದ್ದಾರೆ.

ಚಂದ್ರಬಾಬು ನಾಯ್ಡು ಶ್ರೀಮಂತ ರಾಜಕಾರಣಿ ಆಗಿದ್ದಾರೆ.ಅಪ್ಪ- ಮಗನ ಸರ್ಕಾರ ದಿನ ಎಣಿಕೆ ಮಾಡುತ್ತಿದೆ. ಈ ಚುನಾವಣೆಯಲ್ಲಿ ಅವರು ಸೋಲುತ್ತಾರೆ ಎಂದು ಮೋದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.