ಜೈಪುರ: ‘ಶಂಕರಾಚಾರ್ಯ ಅವರ ನೇತೃತ್ವದಲ್ಲಿ ದಲಿತರು, ಬುಡಕಟ್ಟು ಜನರು, ಒಬಿಸಿ, ಎಲ್ಲ ಧರ್ಮಗಳ ಪ್ರತಿನಿಧಿಗಳಿಂದ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಬೇಕು’ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹಲೋತ್ ಸಲಹೆ ಮಾಡಿದ್ದಾರೆ.

‘ಪ್ರತಿಷ್ಠಾಪನೆ ಕಾರ್ಯದಲ್ಲಿ ತಾವೇ ಮುಂಚೂಣಿಯಲ್ಲಿ ಇರುವ ಬದಲು, ಇಂಥ ಕಾರ್ಯದ ಮೂಲಕ ಅಸ್ಪೃಶ್ಯತೆ ವಿರುದ್ಧ ಸಮಾಜಕ್ಕೆ ಸ್ಪಷ್ಟ ಸಂದೇಶ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೊಂದು ಸದವಕಾಶವಾಗಿದೆ’ ಎಂದು ಶುಕ್ರವಾರ ಪ್ರತಿಪಾದಿಸಿದರು.

ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ‘ಸಮಾರಂಭಕ್ಕೆ ರಾಷ್ಟ್ರಪತಿಯವರು ಹೋಗಬಹುದು. ಮಾಜಿ ರಾಷ್ಟ್ರಪತಿ ಕೋವಿಂದ್ ಅವರೂ ದಲಿತ ವರ್ಗದವರು, ಅವರನ್ನು ಆಹ್ವಾನಿಸಬೇಕಿತ್ತು. ಎಲ್.ಕೆ.ಅಡ್ವಾಣಿ ಅವರನ್ನೂ ಆಹ್ವಾನಿಸಬೇಕಿತ್ತು’ ಎಂದು ಹೇಳಿದರು.

‘ಕೋವಿಡ್ ವೇಳೆ ಗಂಟೆ ಹೊಡೆಯಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದರು. ಅಂತೆಯೇ ಈಗಲೂ ಜ.22ರ ನಂತರ ದೇಶದಲ್ಲಿ ಅಸ್ಪೃಶ್ಯತೆ ಇರುವುದಿಲ್ಲ ಎಂದು ಅವರು ಕರೆ ನೀಡಬೇಕು’ ಎಂದು ಕಾಂಗ್ರೆಸ್ ನಾಯಕರಾದ ಗೆಹಲೋತ್ ಸಲಹೆ ಮಾಡಿದರು.

‘ಒಂದು ವೇಳೆ ಪ್ರಧಾನಿಯವರು ಇಂತಹ ಘೋಷಣೆಯನ್ನು ಮಾಡಿದ್ದೇ ಆದಲ್ಲಿ ಪ್ರಧಾನಿಯವರ ವರ್ಚಸ್ಸು ಮತ್ತು ಅವರ ಮೇಲಿನ ಗೌರವ ಇನ್ನಷ್ಟು ಹೆಚ್ಚಲಿದೆ. ಆದರೆ, ಈಗ ಪ್ರಧಾನಿಯವರೊಬ್ಬರೇ ಪ್ರಾಣ ಪ್ರತಿಷ್ಠಾಪನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.