ನವದೆಹಲಿ: ರಾಷ್ಟ್ರೀಯ ವಿಜ್ಞಾನ ದಿನದಂದು 'ಮನ್ ಕಿ ಬಾತ್' ರೆಡಿಯೊ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿರುವಪ್ರಧಾನಿ ನರೇಂದ್ರ ಮೋದಿ ಅನೇಕ ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮನ್ ಕಿ ಬಾತ್ ಮುಖ್ಯಾಂಶಗಳು:

ವಿಜ್ಞಾನದ ಇತಿಹಾಸವನ್ನು ಅರ್ಥಮಾಡಿಕೊಳ್ಳಿ:
ಇಂದು ರಾಷ್ಟ್ರೀಯ ವಿಜ್ಞಾನ ದಿನ, 'ರಾಮನ್ ಪರಿಣಾಮವನ್ನು' ಪತ್ತೆ ಮಾಡಿದ ವಿಜ್ಞಾನಿ ಡಾ. ಸಿ. ವಿ. ರಾಮನ್ ಅವರಿಗೆ ಈ ದಿನವನ್ನು ಸಮರ್ಪಿಸಲಾಗಿದೆ. ನಮ್ಮ ಯುವ ಪೀಳಿಗೆ ಭಾರತೀಯ ವಿಜ್ಞಾನಿಗಳ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಬೇಕಿದ್ದು, ದೇಶದ ವಿಜ್ಞಾನದ ಇತಿಹಾಸವನ್ನು ಅರ್ಥಮಾಡಿಕೂಳ್ಳಬೇಕು ಎಂದು ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರತಿಪಾದಿಸಿದರು.

ಜಲ ಸಂರಕ್ಷಣೆಯ ಅರಿವು ಅಗತ್ಯ:
ಜಲ ಸಂರಕ್ಷಣೆಯ ಜವಾಬ್ದಾರಿಯು ರಾಷ್ಟ್ರೀಯ ಜವಾಬ್ದಾರಿಯಾಗಿದ್ದು, ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯ ನಿಭಾಯಿಸಬೇಕಿದೆ ಎಂದು ಪ್ರಧಾನಿ ಮೋದಿ ಮನವಿ ಮಾಡಿದರು.

ಇತ್ತೀಚಿನ ಗಣತಿಯ ಪ್ರಕಾರ, ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಒಟ್ಟು 112 ಜಾತಿಯ ಪಕ್ಷಿಗಳನ್ನು ಪತ್ತೆ ಹಚ್ಚಲಾಗಿದೆ. ನೀರಿನ ಸಂರಕ್ಷಣೆ ಹಾಗೂ ಮಾನವನ ಹಸಕ್ಷೇಪ ಇಲ್ಲದಿರುವುದು ಇದಕ್ಕೆ ಕಾರಣವಾಗಿದೆ ಎಂದರು.

ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ ಕಿವಿಮಾತು:
ಶೀಘ್ರದಲ್ಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ನೆನಪಿಡಿ ನೀವು ಯೋಧರಾಗಿರಬೇಕು ಅಲ್ಲದೆ ಚಿಂತಿತರಾಗಬಾರದು (ವರಿ ಮಾಡ್ಬೇಡಿ, ವಾರಿಯರ್ಸ್ ಆಗಿ). ಪರೀಕ್ಷೆಗೆ ಉತ್ತಮ ತಯಾರಿ ಮಾಡಿ. ಸರಿಯಾಗಿ ನಿದ್ರಿಸಿ. ಸಮಯವನ್ನು ನಿರ್ವಹಿಸುತ್ತಲೇ ಆಟವಾಡಿ. ಮಾರ್ಚ್ ತಿಂಗಳ 'ಪರೀಕ್ಷಾ ಪೇ ಚರ್ಚಾ' ವಿಷಯದಲ್ಲಿ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರು ಸಲಹೆಗಳನ್ನು ಹಂಚಿಕೊಳ್ಳುವಂತೆ ವಿನಂತಿ ಮಾಡುತ್ತೇನೆ ಎಂದರು.

ತಮಿಳು ಕಲಿಯದ ಕೊರಗು:
ಕೆಲವೊಮ್ಮೆ ಸರಳವಾದ ಪ್ರಶ್ನೆ ನಿಮ್ಮನ್ನು ತಲ್ಲಣಗೊಳಿಸುತ್ತದೆ. ಕೆಲವು ದಿನಗಳ ಹಿಂದೆ ಒಬ್ಬರು ನನಗೆ ಏನನ್ನಾದರೂ ಕರಗತ ಮಾಡಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದ್ದರು. ವಿಶ್ವದ ಅತ್ಯಂತ ಪ್ರಾಚೀನ ಭಾಷೆ ತಮಿಳು ಕಲಿತುಕೊಳ್ಳಲು ನಾನು ಸಾಕಷ್ಟು ಪ್ರಯತ್ನಗಳನ್ನು ಮಾಡಲಿಲ್ಲ ಎಂಬ ಭಾವನೆ ನನ್ನಲ್ಲಿ ಉಂಟಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸಿಲು ನಾಯಕ್ ಸೇವೆಗೆ ಪ್ರಧಾನಿ ಶ್ಲಾಘನೆ:
ಒಡಿಶಾ ಅರಕುಡಾ ಮೂಲದ ಸಿಲು ನಾಯಕ್ ಅವರು ಸೇನೆ ಹಾಗೂ ಭದ್ರತಾಪಡೆಗೆ ಸೇರಲು ಬಯಸುವವರರಿಗೆ ಉಚಿತ ತರಬೇತಿಯನ್ನು ನೀಡುತ್ತಾರೆ. ಅವರ ಮಾರ್ಗದರ್ಶನದಲ್ಲಿ ತರಬೇತಿ ಪಡೆದ ಅನೇಕ ಯುವಕರು ಸೇನೆಗೆ ಬಡ್ತಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸಿಲು ನಾಯಕ್ ಅವರನ್ನು ಪ್ರಧಾನಿ ಮೋದಿ ವಿಶೇಷವಾಗಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.