ನವದೆಹಲಿ: ದೇಶದ 75ನೇ ಸ್ವಾತಂತ್ರ್ಯೋತ್ಸವದ ಸ್ಮರಣಾರ್ಥ ನಡೆಯುವ ‘ಅಮೃತ ಮಹೋತ್ಸವ’ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 12ರಂದು ಚಾಲನೆ ನೀಡುವರು.

ಈ ಕಾರ್ಯಕ್ರಮಕ್ಕೆ ಅಹಮದಾಬಾದ್ನಲ್ಲಿರುವ ಸಬರಮತಿ ಆಶ್ರಮದಲ್ಲಿ ಪ್ರಧಾನಿ ಹಸಿರು ನಿಶಾನೆ ತೋರುವರು. ನವಸಾರಿ ಜಿಲ್ಲೆಯಲ್ಲಿರುವ ದಂಡಿ ವರೆಗೆ ಪಾದಯಾತ್ರೆ ನಡೆಯುವುದು ಎಂದು ಕೇಂದ್ರ ಪ್ರವಾಸೋದ್ಯಮ, ಸಂಸ್ಕೃತಿ ಸಚಿವ ಪ್ರಹ್ಲಾದಸಿಂಗ್ ಪಟೇಲ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಈ ಪಾದಯಾತ್ರೆ 25 ದಿನಗಳ ಕಾಲ ನಡೆಯಲಿದ್ದು, ಒಟ್ಟು 241 ಮೈಲು ಕ್ರಮಿಸುವುದು. ಏಪ್ರಿಲ್ 5ರಂದು ಈ ಪಾದಯಾತ್ರೆ ಮುಕ್ತಾಯಗೊಳ್ಳಲಿದ್ದು, 81 ಜನರು ಪಾಲ್ಗೊಳ್ಳುವರು’ ಎಂದರು.

‘ನದಿಯಾದ್ ವರೆಗಿನ ಮೊದಲ ಹಂತದ ಪಾದಯಾತ್ರೆಯ ನೇತೃತ್ವವನ್ನು ನಾನು ವಹಿಸುವೆ’ ಎಂದೂ ಪಟೆಲ್ ಹೇಳಿದರು.

‘ಇತರ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸಹ ಈ ಅಂಗವಾಗಿ ಕಾರ್ಯಕ್ರಮಗಳು ನಡೆಯಲಿವೆ. ‘ಅಮೃತ ಮಹೋತ್ಸವ’ ದ ಅಂಗವಾಗಿ ಮಾರ್ಚ್ 12ರಿಂದ ಮುಂದಿನ ವರ್ಷ ಆಗಸ್ಟ್ 15ರ ವರೆಗೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.