ನವದೆಹಲಿ: ಗುಜರಾತ್‌ನಲ್ಲಿ ನಡೆಯಲಿರುವ ರಣ್ ಉತ್ಸವ ಮತ್ತು ಏಕತಾ ಪ್ರತಿಮೆಗೆ ಭೇಟಿ ನೀಡುವಂತೆ ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಅವರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ಸಲಹೆ ನೀಡಿದ್ದಾರೆ.

ಉತ್ತರಾಖಂಡದ ಆದಿ ಕೈಲಾಸ ಮತ್ತು ಪಾರ್ವತಿ ಕುಂಡಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಿತ್ರವನ್ನು ‘ಎಕ್ಸ್’ ಖಾತೆಯಲ್ಲಿ ಹಂಚಿಕೊಂಡಿರುವ ಅಮಿತಾಬ್ ಬಚ್ಚನ್, ತಾವು ಈ ಸ್ಥಳಗಳಿಗೆ ಭೇಟಿ ನೀಡಲು ಆಗದೇ ಇರುವುದಕ್ಕೆ ವಿಷಾದ ವ್ಯಕ್ತಪಡಿಸಿದ್ದರು. ಬಚ್ಚನ್ ಅವರ ಈ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಮೋದಿ, ಗುಜರಾತ್‌ನ ಕಛ್‌ಗೆ ಭೇಟಿ ನೀಡುವಂತೆ ಹೇಳಿದ್ದಾರೆ.

‘ಮುಂದಿನ ವಾರ ಕಛ್‌ನಲ್ಲಿ ರಣ್ ಉತ್ಸವ ನಡೆಯಲಿದೆ. ನೀವು ಅಲ್ಲಿಗೆ ಭೇಟಿ ನೀಡಬೇಕು. ಜತೆಗೆ ಏಕತಾ ಪ್ರತಿಮೆಗೆ ಭೇಟಿ ನೀಡುವುದೂ ಬಾಕಿ ಇದೆ‘ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.