ಮುಂಬೈ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಣಿಜ್ಯ ನಗರಿ ಮುಂಬೈಯ ರಸ್ತೆ, ರೈಲ್ವೆ, ಬಂದರು ವಲಯಗಳಲ್ಲಿ ₹29,000 ಕೋಟಿಗೂ ಅಧಿಕ ಮೌಲ್ಯದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ, ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಈ ವೇಳೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, 'ಮಹಾರಾಷ್ಟ್ರವನ್ನು ವಿಶ್ವದ ಅತಿ ದೊಡ್ಡ ಆರ್ಥಿಕ ಶಕ್ತಿಯಾಗಿ ಮತ್ತು ಮುಂಬೈಯನ್ನು ಜಾಗತಿಕ 'ಫಿನ್ಟೆಕ್' ರಾಜಧಾನಿಯನ್ನಾಗಿ ಮಾಡುವುದು ನನ್ನ ಗುರಿಯಾಗಿದೆ' ಎಂದು ಹೇಳಿದ್ದಾರೆ.

ಅವಳಿ ಸುರಂಗ ಯೋಜನೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಇದರಲ್ಲಿ ₹16,600 ಕೋಟಿ ಮೌಲ್ಯದ ಥಾಣೆ-ಬೊರಿವಲಿ ಸುರಂಗ ಮಾರ್ಗದ ಯೋಜನೆ ಹಾಗೂ ₹6,300 ಕೋಟಿ ಮೌಲ್ಯದ ಗೋರೆಗಾಂವ್-ಮುಲುಂಡ್ ಲಿಂಕ್ ರೋಡ್ (ಜಿಎಂಎಲ್ಆರ್) ಸುರಂಗ ಯೋಜನೆ ಒಳಗೊಂಡಿದೆ.

₹5,600 ಕೋಟಿ ಮೌಲ್ಯದ 'ಮುಖ್ಯಮಂತ್ರಿ ಯುವ ಕಾರ್ಯ ಪ್ರಶಿಕ್ಷಣ ಯೋಜನೆ'ಗೂ ಪ್ರಧಾನಿ ಚಾಲನೆ ನೀಡಿದ್ದಾರೆ.

ಲೋಕಮಾನ್ಯ ತಿಲಕ್ ಟರ್ಮಿನಸ್ ಮತ್ತು ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ನಲ್ಲಿ ಹೊಸ ಫ್ಲ್ಯಾಟ್ಫಾರ್ಮ್ ಅನ್ನು ಪ್ರಧಾನಿ ಮೋದಿ ರಾಷ್ಟ್ರಕ್ಕೆ ಸಮರ್ಪಿಸಿದ್ದಾರೆ.
.ಎಂ.ಎಸ್. ಸ್ವಾಮಿನಾಥನ್ ಕೊಡುಗೆ ಅಚ್ಚಳಿಯದೆ ಉಳಿಯಲಿದೆ: ಪ್ರಧಾನಿ ಮೋದಿ.ಸಂವಿಧಾನ ಹತ್ಯಾ ದಿವಸ್ಗೆ ಖಂಡನೆ: ಜೂನ್ 4 ಮೋದಿ ಮುಕ್ತಿ ದಿವಸ್ ಎಂದ ಕಾಂಗ್ರೆಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.