ನವದೆಹಲಿ: ದೇಶದಲ್ಲಿ 2019ರಲ್ಲಿ 19,467 ಜನರು ಪೊಲೀಸ್ ಭದ್ರತೆ ಪಡೆದಿದ್ದು, ಈ ಪೈಕಿ ಪಶ್ಚಿಮ ಬಂಗಾಳ, ಪಂಜಾಬ್, ಬಿಹಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ಜನರೇ ಅಧಿಕವಾಗಿದ್ದಾರೆ.

ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಬಿಪಿಆರ್‌ಆ್ಯಂಡ್‌ಡಿ) ದತ್ತಾಂಶವು ಇದನ್ನು ಉಲ್ಲೇಖಿಸಿದ್ದು, 2018ಕ್ಕೆ ಹೋಲಿಸಿದರೆ 2019ರಲ್ಲಿ ದೇಶದಲ್ಲಿ ಪೊಲೀಸ್ ಭದ್ರತೆ ಪಡೆಯುತ್ತಿರುವ ಜನರ ಸಂಖ್ಯೆ ಶೇ 8.7 ಇಳಿಕೆಯಾಗಿದೆ ಎಂದಿದೆ.

2018ರಲ್ಲಿ 21,300 ಜನರು ಪೊಲೀಸ್ ಭದ್ರತೆಯಲ್ಲಿದ್ದರು. 2018 ಹಾಗೂ 2019ರಲ್ಲಿ ಸಚಿವರು, ಸಂಸದರು, ಶಾಸಕರು, ನ್ಯಾಯಾಧೀಶರು ಸೇರಿದಂತೆ ಗಣ್ಯರ ರಕ್ಷಣೆಗಾಗಿ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಸಂಖ್ಯೆಅನುಮೋದನೆಗಿಂತಲೂ ಶೇ 35 ಅಧಿಕವಾಗಿತ್ತು ಎಂದು ಸಂಸ್ಥೆಯ ಅಂಕಿ ಅಂಶಗಳು ತಿಳಿಸುತ್ತವೆ.

2019ರಲ್ಲಿ ಭದ್ರತಾ ಸೇವೆಗೆ 43,556 ಪೊಲೀಸ್ ಸಿಬ್ಬಂದಿಗೆ ಅನುಮೋದನೆ ದೊರೆತಿತ್ತು. ಆದರೆ 66,043 ಸಿಬ್ಬಂದಿ ನಿಯೋಜನೆಗೊಂಡಿದ್ದರು. 2018ರಲ್ಲಿ 40,031 ಸಿಬ್ಬಂದಿಗೆ ಅನುಮೋದನೆ ಸಿಕ್ಕಿದ್ದರೆ 63,061 ಸಿಬ್ಬಂದಿ ಭದ್ರತಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಎಂದು ಸಂಸ್ಥೆಯು ಮಾಹಿತಿ ನೀಡಿದೆ.

ಪೊಲೀಸ್ ಭದ್ರತೆಯಲ್ಲಿರುವ ಜನರ ಸಂಖ್ಯೆ

ರಾಜ್ಯ–2019–2018

ಪಶ್ಚಿಮ ಬಂಗಾಳ–3,142–2,769

ಪಂಜಾಬ್–2,594–2,522

ಬಿಹಾರ–2,347–4,677

ಜಮ್ಮು ಮತ್ತು ಕಾಶ್ಮೀರ–1,184–1,493

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.