ಕೋಲ್ಕತ್ತ: ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ಅವರನ್ನು ಅವಕಾಶವಾದಿ ರಾಜಕಾರಣಿ ಎಂದು ಬಣ್ಣಿಸಿರುವ ಪಶ್ಚಿಮ ಬಂಗಾಳದ ಬಿಜೆಪಿ ಸಂಸದ ದಿಲೀಪ್ ಘೋಷ್ ಅವರು, ಇದಕ್ಕೆಲ್ಲ ಅಂತ್ಯ ಹಾಡಬೇಕಿದೆ ಎಂದು ಪ್ರತಿಪಾದಿಸಿದರು.

‘ಸಾಮಾನ್ಯವಾಗಿ ಶಾಸಕರು ಐದು ವರ್ಷಗಳ ಅವಧಿಯಲ್ಲಿ ಒಮ್ಮೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಆದರೆ ನಿತೀಶ್ ಇದಕ್ಕೆ ಭಿನ್ನ. ಅವರು ಐದು ವರ್ಷಗಳಲ್ಲಿ ಕನಿಷ್ಠ ಎರಡು ಅಥವಾ ಮೂರು ಬಾರಿ ಸಿ.ಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಾರೆ. ಅದೂ ಪ್ರತಿ ಬಾರಿಯೂ ಬೇರೆ ಮೈತ್ರಿಯೊಂದಿಗೆ ಕೈಜೋಡಿಸಿ ಈ ಕಾರ್ಯ ಮಾಡುತ್ತಾರೆ’ ಎಂದು ಅವರು ವ್ಯಂಗ್ಯವಾಡಿದರು.

‘ನಾನು ಇದನ್ನು ಅವಕಾಶವಾದದ ರಾಜಕೀಯ ಎಂದೇ ಭಾವಿಸುತ್ತೇನೆ. ಈ ರೀತಿ ಮಾಡುವುದನ್ನು ನಿಲ್ಲಿಸಬೇಕಾದ ಸಮಯ ಬಂದಿದೆ’ ಎಂದು ಅವರು ಹೇಳಿದರು.

ಘೋಷ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಲು ರಾಜ್ಯ ಬಿಜೆಪಿ ವಕ್ತಾರ ಸಮಿಕ್ ಭಟ್ಟಾಚಾರ್ಯ ನಿರಾಕರಿಸಿದರು.

‘ಜೆಡಿಯು ಮತ್ತು ಆರ್ಜೆಡಿಯು ಪಕ್ಷದ್ದು ಪ್ರೇಮರಹಿತ ವಿವಾಹವಾಗಿತ್ತು. ಇಂಥ ವಿವಾಹವು ಶಾಶ್ವತವಾಗಿ ಮುಂದುವರಿಯುವುದಿಲ್ಲ. ಈಗ ಆಗಿದ್ದೂ ಅದೇ’ ಎಂದು ಭಟ್ಟಾಚಾರ್ಯ ಪ್ರತಿಕ್ರಿಯಿಸಿದರು.

ಈ ಹಿಂದೆ ಜನರ ಆದೇಶವನ್ನು ಕಡೆಗಣಿಸಿ ಎನ್ಡಿಎ ತೊರೆದಿದ್ದ ನಿತೀಶ್ ಅವರು, ಈಗ ಎನ್ಡಿಎಗೆ ಮರಳುವ ಮೂಲಕ ತಮ್ಮ ಹಿಂದಿನ ರಾಜಕೀಯ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡುತ್ತಿದ್ದಾರೆ’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.