ನವದೆಹಲಿ: ಪೋಶೆ ಕಾರು ಅಪಘಾತ ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ 17 ವರ್ಷದ ಬಾಲಕನನ್ನು ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲು ಪುಣೆ ಪೊಲೀಸರು ಚಿಂತನೆ ನಡೆಸಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಸೋಮವಾರ ತಿಳಿಸಿದರು.

ಬಾಲಮಂದಿರದಲ್ಲಿ ಬಾಲಕನನ್ನು ಇರಿಸುವಂತೆ ಬಾಲ ನ್ಯಾಯ ಮಂಡಳಿ (ಜೆಜೆಬಿ) ನೀಡಿದ್ದ ಆದೇಶವು ಕಾನೂನುಬಾಹಿರ ಎಂದು ಹೇಳಿದ್ದ ಬಾಂಬೆ ಹೈಕೋರ್ಟ್, ಆತನನ್ನು ಬಿಡುಗಡೆಗೊಳಿಸುವಂತೆ ಜೂನ್ 25ರಂದು ಆದೇಶ ಹೊರಡಿಸಿತ್ತು. ಬಳಿಕ ಆತನನ್ನು ಬಿಡುಗಡೆ ಮಾಡಿ, ಸಂಬಂಧಿಯೊಬ್ಬರ ಸಪರ್ದಿಗೆ ಒಪ್ಪಿಸಲಾಗಿತ್ತು

ಪ್ರಕರಣದ ಇನ್ನಿತರ ಆರೋಪಿಗಳಾದ ಬಾಲಕನ ಪೋಷಕರು ಮತ್ತು ಅಜ್ಜ ಸದ್ಯ ಜೈಲಿನಲ್ಲಿದ್ದಾರೆ.

ಮೇ 19ರಂದು ನಡೆದಿದ್ದ ಈ ಅಪಘಾತದಲ್ಲಿ ಇಬ್ಬರು ಟೆಕಿಗಳು ಮೃತಪಟ್ಟಿದ್ದರು. ಪ್ರಕರಣದಲ್ಲಿ ಕಾನೂನು ಸಂಘರ್ಷಕ್ಕೆ ಒಳಗಾಗಿರುವ ಬಾಲಕನು ಮದ್ಯ ಸೇವಿಸಿ ಕಾರು ಚಾಲನೆ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.
.ಪೋಶೆ ಕಾರು ಅಪಘಾತ: ಬಾಲಕನನ್ನು ಕೂಡಲೇ ಬಿಡುಗಡೆ ಮಾಡುವಂತೆ ಬಾಂಬೆ ಹೈಕೋರ್ಟ್ ಆದೇಶ.ಪೋಶೆ ಕಾರು ಅಪಘಾತ: ಪೊಲೀಸ್ ವಶದಲ್ಲಿರುವ ಬಾಲಕನ ಬಗ್ಗೆ ಹೈಕೋರ್ಟ್ ಹೇಳಿದ್ದೇನು?.ಪುಣೆ ಪೋಶೆ ಕಾರು ಅಪಘಾತ | ಪೊಲೀಸರ ವಿರುದ್ಧ ಕ್ರಮ ಅನಗತ್ಯ: ಫಡಣವೀಸ್.ಪೋಶೆ ಕಾರು ಅಪಘಾತ: ಬಾಲಕನಿಗೆ ನೀಡಿದ ಜಾಮೀನು ಪ್ರಕ್ರಿಯೆಯಲ್ಲಿ ಲೋಪಗಳು.ಪೋಶೆ ಕಾರು ಅಪಘಾತ: ಆರೋಪಿಯ ತಂದೆ, ತಾತನ ವಿರುದ್ಧ ಮತ್ತೊಂದು ಪ್ರಕರಣ.ಪೋಶೆ ಕಾರು ದುರಂತ | ಬಾಲಕನ ತಾಯಿಯ ರಕ್ತದ ಮಾದರಿ ಬಳಕೆ: ವೈದ್ಯರು ಸೇರಿ ಮೂವರ ಬಂಧನ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.