ಸೋಮವಾರ, 23 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಹಾರ: ನಿರ್ಮಾಣ ಹಂತದ ಸೇತುವೆ ಕುಸಿತ

Published : 23 ಸೆಪ್ಟೆಂಬರ್ 2024, 14:24 IST
Last Updated : 23 ಸೆಪ್ಟೆಂಬರ್ 2024, 14:24 IST
ಫಾಲೋ ಮಾಡಿ
Comments

ಪಟ್ನಾ: ಬಿಹಾರದ ಪಟ್ನಾ ಜಿಲ್ಲೆಯಲ್ಲಿ ₹1,602 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸುತ್ತಿರುವ ‘ಬಕ್ತಿಯಾರಪುರ– ತಾಜ್ಪುರ ಗಂಗಾ ಮಹಾಸೇತು’ವಿನ ಭಾಗವೊಂದು ಭಾನುವಾರ ರಾತ್ರಿ ಕುಸಿದಿದೆ.

‘ಗರ್ಡರ್‌ನ ಬೇರಿಂಗ್ ಬದಲಿಸುವಾಗ ಈ ಅವಘಡ ಸಂಭವಿಸಿದೆ. ’ ಎಂದು ಬಿಹಾರ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ಲಿಮಿಟೆಡ್‌ನ (ಬಿಎಸ್‌ಆರ್‌ಡಿಸಿಎಲ್‌) ಮುಖ್ಯ ಪ್ರಧಾನ ವ್ಯವಸ್ಥಾಪಕ ಪ್ರಬಿನ್ ಚಂದ್ರ ಗುಪ್ತಾ ಸೋಮವಾರ ತಿಳಿಸಿದ್ದಾರೆ.

5.57 ಕಿ.ಮೀ. ಉದ್ದದ ಈ ಸೇತುವೆ ನಿರ್ಮಾಣಕ್ಕೆ ಮುಖ್ಯಮಂತ್ರಿ ನಿತೀಶ್ ಕುಮಾರ್‌ 2011ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರ ನಿರ್ಮಾಣದ ಮೇಲ್ವಿಚಾರಣೆಯನ್ನು ಬಿಎಸ್‌ಆರ್‌ಡಿಸಿಎಲ್‌ ವಹಿಸಿಕೊಂಡಿದೆ.

‘ಆಡಳಿತಾರೂಢ ಎನ್‌ಡಿಎ ಸರ್ಕಾರದ ಕಮಿಷನ್ ದಂಧೆ, ಸುಲಿಗೆಯನ್ನು ಈ ಘಟನೆಯು ಸಾಬೀತುಪಡಿಸಿದೆ. ಮುಖ್ಯಮಂತ್ರಿ ಪರಿಶೀಲನೆ ನಡೆಸಿದ ಕೆಲವೇ ದಿನಗಳಲ್ಲಿ ಜಮುಈಯ ಬರ್ನಾರ್‌ ನದಿಗೆ ನಿರ್ಮಿಸುತ್ತಿದ್ದ ಸೇತುವೆಯೂ ವಾರದ ಹಿಂದಷ್ಟೇ ಕುಸಿದಿದೆ. ಈಚೆಗೆ ರಾಜ್ಯದಲ್ಲಿ ಸೇತುವೆಗಳು ನಿರಂತರವಾಗಿ ಕುಸಿಯುತ್ತಿರುವುದಕ್ಕೆ ಪ್ರಧಾನಿ ಮೋದಿ ಅವರು ಜನರಿಗೆ ಏನು ಹೇಳುತ್ತಾರೆ’ ಎಂದು ಆರ್‌ಜೆಡಿ ನಾಯಕ ತೆಜಸ್ವಿ ಯಾದವ್‌ ‘ಎಕ್ಸ್‌’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT