ನವದೆಹಲಿ: ನರೇಂದ್ರ ಮೋದಿಯವರ ಚುನಾವಣಾ ರ‍್ಯಾಲಿಗಾಗಿ ಮರ ಕಡಿದರೆ ಯಾಕೆ ಇಷ್ಟೊಂದು ಗಲಾಟೆ ಮಾಡುತ್ತಿದ್ದೀರಿ? ಇತರ ನಾಯಕರ ರ‍್ಯಾಲಿಗಾಗಿ ಮರಗಳನ್ನು ಕಡಿಯಲಾಗಿದೆ. ಈ ಹಿಂದಿನ ಪ್ರಧಾನಿಗಳ ರ‍್ಯಾಲಿಗಾಗಿಯೂ ಮರಕ್ಕೆ ಕತ್ತರಿ ಬಿದ್ದಿದೆ. ಆಗ ಯಾಕೆ ಈ ರೀತಿಯ ಜಾಗೃತಿ ಇರಲಿಲ್ಲ ಎಂದು ಪರಿಸರ ಮತ್ತು ಅರಣ್ಯ ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಪ್ರಶ್ನಿಸಿದ್ದಾರೆ.

ಅಕ್ಟೋಬರ್ 17ರಂದು ನಡೆಯಲಿರುವ ಮೋದಿ ರ‍್ಯಾಲಿಗಾಗಿ ಪುಣೆಯ ಸರ್ ಪರಶುರಾಮ್ ಕಾಲೇಜ್ ಕ್ಯಾಂಪಸ್‌ನಲ್ಲಿ ಸೋಮವಾರಮರಗಳನ್ನು ಕತ್ತರಿಸಲಾಗಿದೆ ಎಂದು ವಿಪಕ್ಷಗಳು ದೂರಿದ್ದವು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಪ್ರತಿ ಬಾರಿ ನಾವು ಮರಗಳನ್ನು ಕತ್ತರಿಸಿದಾಗ ಹೆಚ್ಚು ಗಿಡಗಳನ್ನು ನೆಡುತ್ತೇವೆ. ಇದು ಅರಣ್ಯ ಇಲಾಖೆಯ ನಿಯಮ ಎಂದಿದ್ದಾರೆ.

ಇದನ್ನೂ ಓದಿ:ಅಂಬೇಡ್ಕರ್ಗೆ ಭಾರತರತ್ನ ನಿರಾಕರಿಸಿದವರಿಂದಲೇ ಸಾವರ್ಕರ್ಗೆ ಅವಮಾನ

ಮಹಾರಾಷ್ಟ್ರದಲ್ಲಿ ರೈತರ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಜಾವಡೇಕರ್, ಕಳೆದ ಕಾಂಗ್ರೆಸ್- ಎನ್‌ಸಿಪಿ ಸರ್ಕಾರವಿದ್ದಾಗಲೇ ಇಂತಾ ಪ್ರಕರಣಗಳು ಇದ್ದವು. ಕೇವಲ ಐದು ಜಿಲ್ಲೆಗಳಲ್ಲಿ ಮಾತ್ರ ರೈತರ ಆತ್ಮಹತ್ಯೆ ಪ್ರಕರಣ ವರದಿಯಾಗುತ್ತಿದೆ. ಅಲ್ಲಿ ನೀರಾವರಿ ಸೌಕರ್ಯ ಇಲ್ಲದ ಕಾರಣ ರೈತರು ಆತ್ಮಹತ್ಯೆ ಮಾಡುತ್ತಿದ್ದಾರೆ.

ಅದೇ ವೇಳೆ ಪಂಜಾಬ್ -ಮಹಾರಾಷ್ಟ್ರ ಕಾರ್ಪೊರೇಟಿವ್ ಬ್ಯಾಂಕ್‌ನಲ್ಲಿನ ಆರ್ಥಿಕ ಬಿಕ್ಕಟ್ಟಿಗೆ ಎನ್‌ಸಿಪಿ ಕಾರಣ ಎಂದು ಜಾವಡೇಕರ್ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.