ಮುಜಾಫರ್‌ನಗರ: ಅಪಹರಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಗೆಳೆಯನ ವಿರುದ್ಧ ಸಾಕ್ಷಿ ಹೇಳಲು ಒಪ್ಪದ ಎಂಟು ತಿಂಗಳ ಗರ್ಭಿಣಿಯನ್ನು ಪೋಷಕರೇ ಕತ್ತು ಹಿಸುಕಿ ಹತ್ಯೆ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಾಫರ್‌ನಗರದಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

19 ವರ್ಷದ ಯುವತಿ ಮತ್ತು ಆಕೆಯ ಗೆಳೆಯ 2022ರ ಅಕ್ಟೋಬರ್‌ನಲ್ಲಿ ಓಡಿಹೋಗಿದ್ದರು. ಅದೇ ವರ್ಷ ಡಿಸೆಂಬರ್‌ನಲ್ಲಿ ಯುವತಿಯನ್ನು ಪತ್ತೆ ಮಾಡಿದ ಪೋಷಕರು ಯುವಕನನ್ನು ಜೈಲಿಗೆ ಕಳುಹಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ತನ್ನ ಹೇಳಿಕೆಯನ್ನು ಶನಿವಾರ ದಾಖಲಿಸಬೇಕಾಗಿತ್ತು. ಸಾಕ್ಷಿ ಹೇಳಲು ನಿರಾಕರಿಸಿದ ಕಾರಣ ಶುಕ್ರವಾರ ರಾತ್ರಿ ಯುವತಿಯನ್ನು ಹತ್ಯೆಗೈದು ಗೋಯ್ಲಾ ಎನ್ನುವ ಗ್ರಾಮದ ನದಿಗೆ ಎಸೆದಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಮಹಿಳೆಯ ಪೋಷಕರನ್ನು ಬಂಧಿಸಲಾಗಿದೆ. ಪೋಷಕರು ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಸುಮನ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.