ನವದೆಹಲಿ: ಪ್ರವಾದಿ ಮಹಮ್ಮದ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಬಿಜೆಪಿಯ ಉಚ್ಚಾಟಿತ ಮುಖಂಡ ನವೀನ್ ಕುಮಾರ್ ಜಿಂದಾಲ್ ಅವರ ವಿರುದ್ಧ ದೇಶದಾದ್ಯಂತ ದಾಖಲಾಗಿರುವ ಎಲ್ಲ ಎಫ್ಐಆರ್ಗಳನ್ನು ದೆಹಲಿ ಪೊಲೀಸರಿಗೆ ವರ್ಗಾಯಿಸುವಂತೆಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಎಂ.ಎಂ. ಸುಂದ್ರೇಶ್ ಅವರಿದ್ದ ಪೀಠ,ದೆಹಲಿ ಪೊಲೀಸರು ತನಿಖೆ ಮುಕ್ತಾಯಗೊಳ್ಳುವವರೆಗೆ ನವೀನ್ ಕುಮಾರ್ ಜಿಂದಾಲ್ ಅವರಿಗೆ ಮಧ್ಯಂತರ ರಕ್ಷಣೆಯನ್ನೂ ವಿಸ್ತರಿಸಿದೆ.

ಪ್ರವಾದಿಯವರನ್ನು ಅವಹೇಳನ ಮಾಡಿದ ಆರೋಪಗಳ ಸಂಬಂಧ ಜಿಂದಾಲ್ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲ ಎಫ್ಐಆರ್ಗಳ ರದ್ದತಿ ಕೋರಿ ದೆಹಲಿ ಹೈಕೋರ್ಟ್ ಮೊರೆ ಹೋಗಲು ಪೀಠ ಅನುಮತಿಸಿತು. ಅಲ್ಲದೆ, ಭವಿಷ್ಯದಲ್ಲಿ ಈ ವಿಚಾರ ಸಂಬಂಧ ದಾಖಲಾಗುವ ಎಫ್ಐಆರ್ಗಳನ್ನೂ ತನಿಖೆಗಾಗಿ ದೆಹಲಿ ಪೊಲೀಸರಿಗೆ ವರ್ಗಾಯಿಸುವುದಾಗಿ ಪೀಠ ಹೇಳಿತು.

ಎಲ್ಲ ಎಫ್ಐಆರ್ಗಳನ್ನು ದೆಹಲಿ ಪೊಲೀಸ್ ಐಎಫ್ಎಸ್ಒ ಘಟಕಕ್ಕೆ ವರ್ಗಾಯಿಸಬೇಕು. ಎಂಟು ವಾರಗಳವರೆಗೆ ಆರೋಪಿ ವಿರುದ್ಧ ಯಾವುದೇ ಕ್ರಮ ಅಥವಾ ಹೆಚ್ಚಿನ ಎಫ್ಐಆರ್ ದಾಖಲಾಗದಿದ್ದರೆ, ದೆಹಲಿ ಹೈಕೋರ್ಟ್ನಲ್ಲಿ ಪರಿಹಾರ ಪಡೆಯಬಹುದು ಎಂದು ಪೀಠ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.