ಮಂಡ್ಯ:ಶತ್ರು ರಾಷ್ಟ್ರ ನಿರ್ನಾಮ ಆಗಲೇಬೇಕು. ನನ್ನ ದೇಶದಲ್ಲಿ ಸಿಆರ್ಪಿಎಫ್ ಯೋಧರು ಚೆಲ್ಲಿದ ರಕ್ತಕ್ಕೆ ನ್ಯಾಯ ದೊರಕಲೇಬೇಕು. ರಕ್ತಕ್ಕೆ ರಕ್ತ ಸೇಡಿಗೆ ಸೇಡು. ಪ್ರತಿಯೊಬ್ಬ ಭಾರತೀಯನ ರಕ್ತ ಯುದ್ಧಕ್ಕಾಗಿಕುದಿಯುತ್ತಿದೆ ಎಂದು ಬರೆದಿರುವ ಬ್ಯಾನರ್ ಹಿಡಿದು ಘೋಷಣೆಗಳನ್ನು ಕೂಗಿದ ಗುಡಿಗೆರೆ ಜನರು ಯುದ್ಧಕ್ಕಾಗಿ ಆಗ್ರಹಿಸಿದರು.

ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಉಗ್ರರು ನಡೆಸಿದ ದಾಳಿಯಲ್ಲಿ 49 ಯೋಧರು ಹುತಾತ್ಮರಾಗಿದ್ದರು. ಈ ವೇಳೆ ಗುಡಿಗೆರೆಯ ಯೋಧ ಗುರು ಎಚ್. ಅವರೂ ಹುತಾತ್ಮರಾಗಿದ್ದರು.ಪಾಕಿಸ್ತಾನ ಮೂಲದ ಜೈಷ್–ಎ–ಮೊಹಮದ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ.ಇದರ ಬೆನ್ನಲ್ಲೇ ದೇಶದಾತ್ಯಂತ ಪಾಕಿಸ್ತಾನ ವಿರುದ್ಧ ಪ್ರತಿಕಾರದ ಕೂಗು ಕೇಳಿಬರುತ್ತಿದೆ.

ಕೃತ್ಯಕ್ಕೆತಕ್ಕ ಪ್ರತಿಕ್ರಿಯೆ ನೀಡಲಾಗುವುದು ಎಂದುಕೇಂದ್ರ ಸರ್ಕಾರ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆಪ್ರಧಾನಮಂತ್ರಿನರೇಂದ್ರ ಮೋದಿ,‘ಆಕ್ರೋಶ ಮೇರೆ ಮೀರಿದೆ ಮತ್ತು ನಿಮ್ಮ ರಕ್ತ ಕುದಿಯುತ್ತಿದೆ ಎಂಬುದು ನನಗೆ ಗೊತ್ತು. ತಕ್ಕ ಪಾಠ ಕಲಿಸಬೇಕು ಎಂಬ ನಿರೀಕ್ಷೆ ಮತ್ತು ಭಾವನೆ ಈ ಕ್ಷಣದಲ್ಲಿ ಎಲ್ಲರಲ್ಲಿಯೂ ಇರುವುದು ಸಹಜವೇ ಆಗಿದೆ. ಇಂತಹ ದಾಳಿಗೆ ದೇಶವು ಸರಿಯಾದ ಉತ್ತರವನ್ನೇ ನೀಡಲಿದೆ. ಭಾರತವನ್ನು ಬೆದರಿಸಲು ಸಾಧ್ಯವಿಲ್ಲ. ಭದ್ರತಾ ಪಡೆಗಳು ಏನು ಮಾಡಬೇಕೋ ಅದಕ್ಕೆ ಬೇಕಾದ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ನಮ್ಮ ಧೀರ ಯೋಧರ ಮೇಲೆ ಪರಿಪೂರ್ಣ ವಿಶ್ವಾಸ ಇದೆ’ ಎಂದಿದ್ದರು.

‘ನೀವು ಬಹುದೊಡ್ಡ ತಪ್ಪು ಮಾಡಿದ್ದೀರಿ ಎಂದು ಭಯೋತ್ಪಾದಕ ದಾಳಿ ಮಾಡಿದವರು ಮತ್ತು ಅದಕ್ಕೆ ಕುಮ್ಮಕ್ಕು ಕೊಟ್ಟವರಿಗೆ ನಾನು ಹೇಳುತ್ತಿದ್ದೇನೆ. ಇದಕ್ಕಾಗಿ ಅವರು ತೆರಬೇಕಾದ ಬೆಲೆ ಬಹಳ ದೊಡ್ಡದಾಗಿರುತ್ತದೆ. ದಾಳಿ ನಡೆಸಿದ ಸಂಘಟನೆಗೆ ಶಿಕ್ಷೆಯಾಗುವುದು ಖಚಿತ. 130 ಕೋಟಿ ಭಾರತೀಯರು ಸರಿಯಾದ ಪಾಠ ಕಲಿಸಲಿದ್ದಾರೆ’ ಎಂದು ಭದ್ರತೆಯ ಸಂಪುಟ ಸಮಿತಿಯ ಸಭೆಯ ಬಳಿಕ ಶುಕ್ರವಾರಎಚ್ಚರಿಕೆ ನೀಡಿದ್ದರು.

ದಾಳಿ ನಡೆಸಿದವರು ಮತ್ತು ಅದಕ್ಕೆ ಬೆಂಬಲ ನೀಡಿದವರು ಸರಿಯಾದ ಬೆಲೆ ತೆರುವಂತೆ ಮಾಡಲು ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯನೀಡಲಾಗಿದೆ.ಯಾವಾಗ ಮತ್ತು ಹೇಗೆ ಸೇಡು ತೀರಿಸಿಕೊಳ್ಳಬೇಕು ಎಂಬುದು ಭದ್ರತಾ ಪಡೆಗಳಿಗೆ ಬಿಟ್ಟ ವಿಚಾರಎಂದೂ ತಿಳಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.