ನವದೆಹಲಿ: ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗುವಂತಹ ಯಾವುದೇ ನಿರ್ಧಾರ ತೆಗೆದುಕೊಳ್ಳದಿರಲಿ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಟ್ವೀಟಿಸಿದ್ದಾರೆ.

ಟ್ವೀಟ್ ಮಾಡಿರುವ ಗೆಹ್ಲೋಟ್ ಅವರು, ಸೇನೆಯ ಮಾಜಿ ಕ್ಯಾಪ್ಟನ್, ಪಕ್ಷದ ಗೌರವಾನ್ವಿತ ಮುಖಂಡರು, ಮುಂದೆಯೂ ಕಾಂಗ್ರೆಸ್ ಪಕ್ಷದ ಹಿತಾಸಕ್ತಿಯನ್ನು ಗಮನದಲ್ಲಿರಿಸಿ ಮುಂದುವರಿಯುವ ಭರವಸೆ ಇದೆ ಎಂದಿದ್ದಾರೆ.

'ಕ್ಯಾಪ್ಟನ್ ಸಾಹೇಬರೇ ಸ್ವತಃ ಹೇಳಿರುವಂತೆ, ಅವರಿಗೆ ಪಕ್ಷವು ಒಂಬತ್ತೂವರೆ ವರ್ಷಗಳು ಪ್ರಮುಖ ಹೊಣೆಗಾರಿಕೆಯನ್ನು ನೀಡಿದೆ ಹಾಗೂ ಪಂಜಾಬ್‌ನ ಜನತೆಗೆ ಸೇವೆ ಸಲ್ಲಿಸುವ ಕರ್ತವ್ಯವನ್ನು ಅವರು ಅತ್ಯಂತ ಪ್ರಾಮಾಣಿಕವಾಗಿ ಪೂರೈಸಿದ್ದಾರೆ' ಎಂದು ಪ್ರಕಟಿಸಿದ್ದಾರೆ.

ಇದನ್ನೂ ಓದಿ–ಪಂಜಾಬ್: ಮುಖ್ಯಮಂತ್ರಿ ಸ್ಥಾನ ಒಲ್ಲೆ ಎಂದ ಅಂಬಿಕಾ ಸೋನಿ

ಪಂಜಾಬ್ ಕಾಂಗ್ರೆಸ್‌ನ ಕ್ಯಾಪ್ಟನ್ ಅಮರಿಂದರ್ ಸಿಂಗ್ ಶನಿವಾರ ಪಂಜಾಬ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ನೂತನ ಮುಖ್ಯಮಂತ್ರಿಯ ಆಯ್ಕೆ ಈಗ ಸೋನಿಯಾ ಗಾಂಧಿ ಅವರ ಅಂಗಳದಲ್ಲಿದೆ. ಇಂದು ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ನಿಗದಿಪಡಿಸಲಾಗಿದ್ದು, ಅಲ್ಲಿ ನೂತನ ಮುಖ್ಯಮಂತ್ರಿ ಆಯ್ಕೆಯ ಸಂಬಂಧ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜ್ಯಸಭಾ ಸದಸ್ಯೆ ಅಂಬಿಕಾ ಸೋನಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯ ಕುರಿತು ಕೇಳಿಬಂದಿತ್ತಾದರೂ, ಅಂಬಿಕಾ ಮುಖ್ಯಮಂತ್ರಿ ಹೊಣೆಯನ್ನು ನಿರಾಕರಿಸುವುದಾಗಿ ವರದಿಯಾಗಿದೆ.

ಇದನ್ನೂ ಓದಿ: ಆಳ–ಅಗಲ: ಪಂಜಾಬ್, ರಾಜಸ್ಥಾನ ಒಳಜಗಳವೇ ಪ್ರಧಾನ

ಪಂಜಾಬ್ ಕಾಂಗ್ರೆಸ್ ಮಾಜಿ ಮುಖ್ಯಸ್ಥ ಸುನೀಲ್ ಜಾಖಡ್, ಪಂಜಾಬ್ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು, ತೃಪ್ತ್ ರಾಜಿಂದರ್ ಸಿಂಗ್ ಬಾಜ್ವಾ ಮತ್ತು ಸುಖಜಿಂದರ್ ಸಿಂಗ್ ರಾಂಧವ, ಮುಖ್ಯಮಂತ್ರಿ ಸ್ಥಾನಕ್ಕೆ ಕೇಳಿ ಬಂದಿರುವ ಪ್ರಮುಖ ಹೆಸರುಗಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.