ಸುಲ್ತಾನಪುರ ಲೋಧಿ(ಪಂಜಾಬ್): ಪಂಜಾಬ್‌ನ ಕಪೂರ್ತಲಾದಲ್ಲಿ ಗುರುವಾರ ನಿಹಾಂಗ್ ಪಂಥದ ಗುಂಪೊಂದು ಅಪ್ರಚೋದಿತವಾಗಿ ನಡೆಸಿದ ಗುಂಡಿನ ದಾಳಿಯಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಮೃತಪಟ್ಟು, ನಾಲ್ವರು ಪೊಲೀಸರು ಗಾಯಗೊಂಡಿದ್ದಾರೆ.

ಘಟನೆ ಸಂಬಂಧ ಐವರನ್ನು ಬಂಧಿಸಲಾಗಿದ್ದು, ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಪೂರ್ತಲಾದಲ್ಲಿರುವ ಗುರುದ್ವಾರ ಅಕಾಲ್ ಬಂಗಾ ಸಾಹಿಬ್‌ನ ಮೆರವಣಿಗೆ ನಡೆಸುವ ವಿಚಾರದಲ್ಲಿ ನಿಹಾಂಗರ ಎರಡು ಗುಂಪು ನಡುವಿನ ವಿವಾದವೇ ಈ ದುರ್ಘಟನೆಗೆ ಕಾರಣ ಎಂದು ವಿಶೇಷ ಡಿಜಿಪಿ ಅರ್ಪಿತ್ ಶುಕ್ಲಾ ಹೇಳಿದ್ದಾರೆ.

ಬಾಬಾ ಮಾನಸಿಂಗ್ ನೇತೃತ್ವದ ನಿಹಾಂಗರನ್ನು ಗುರುದ್ವಾರದಿಂದ ಹೊರಗೆ ಕಳಿಸಲು ಪೊಲೀಸರು ಮುಂದಾದಾಗ, ಅಲ್ಲಿದ್ದ ನಿಹಾಂಗರ ಗುಂಪೊಂದು ಪೊಲೀಸರತ್ತ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಕೊಲೆ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಶುಕ್ಲಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.