ನವದೆಹಲಿ: ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್ಸಿ) ಅತ್ಯಂತ ವೇಗವಾಗಿ ಬೆಳೆಯುತ್ತಿರುವದಕ್ಷಿಣ ಏಷ್ಯಾದ ವಿಶ್ವವಿದ್ಯಾಲಯವಾಗಿ ಗುರುತಿಸಿಕೊಂಡಿದ್ದು,2023ನೇ ಸಾಲಿನ ಕ್ಯೂಎಸ್ ವರ್ಲ್ಡ್ ಯುನಿವರ್ಸಿಟಿ ಶ್ರೇಯಾಂಕದ ಅಗ್ರ 150 ವಿಶ್ವವಿದ್ಯಾಲಯಗಳ ಪಟ್ಟಿಯೊಳಗೆ ಸ್ಥಾನ ಪಡೆಯುವ ಸನಿಹದಲ್ಲಿದೆ.

ಕ್ಯೂಎಸ್ (ಕ್ವಾಕ್ವಾರೆಲ್ಲಿ ಸೈಮಂಡ್ಸ್) ಶ್ರೇಯಾಂಕದ ಅಗ್ರ 200 ವಿಶ್ವವಿದ್ಯಾನಿಲಯಗಳಲ್ಲಿ ಬೆಂಗಳೂರಿನ ಐಐಎಸ್‌ಸಿ ಸಂಶೋಧನಾ ಸಂಸ್ಥೆ ವರ್ಷದಿಂದ ವರ್ಷಕ್ಕೆ ಮೇಲೇರುತ್ತಿದ್ದು,ಕಳೆದ ಬಾರಿಗಿಂತ 31 ಸ್ಥಾನ ಜಿಗಿತಕಂಡು, ಪ್ರಸ್ತುತ 155ನೇ ರ್‍ಯಾಂಕ್‌ಗೆ ಏರಿದೆ.ಕಳೆದ ಬಾರಿ 186ನೇ ರ‍್ಯಾಂಕ್‌ನಲ್ಲಿದ್ದ ಐಐಎಸ್‌ಸಿ, ಬಾಂಬೆ ಐಐಟಿ ಮತ್ತು ದೆಹಲಿ ಐಐಟಿಗಿಂತ ಅಗ್ರ ಶ್ರೇಯಾಂಕದ ಭಾರತೀಯ ವಿಶ್ವವಿದ್ಯಾಲಯ ಎನ್ನುವ ಶ್ರೇಯ ಪಡೆದುಕೊಂಡಿದೆ.

ಲಂಡನ್ ಮೂಲದ ಜಾಗತಿಕ ಉನ್ನತ ಶಿಕ್ಷಣ ವಿಶ್ಲೇಷಕ ಕ್ವಾಕ್ವಾರೆಲ್ಲಿ ಸೈಮಂಡ್ಸ್ (ಕ್ಯೂಎಸ್) ಗುರುವಾರ ವಿಶ್ವದ ಅತ್ಯಂತ ಹೆಚ್ಚು ಜನಪ್ರಿಯ ಅಂತರರಾಷ್ಟ್ರೀಯ ವಿಶ್ವವಿದ್ಯಾಲಯಗಳ ಶ್ರೇಯಾಂಕದ 19ನೇ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

ಹಾರ್ವರ್ಡ್, ಪ್ರಿನ್ಸ್‌ಟನ್ ವಿಶ್ವವಿದ್ಯಾಲಯ ಮತ್ತು ಎಂಐಟಿಗಿಂತಲೂ ಮುನ್ನಡೆ ಸಾಧಿಸಿ, ವಿಶ್ವದ ಉನ್ನತ ಸಂಶೋಧನಾ ವಿಶ್ವವಿದ್ಯಾಲಯವೆನಿಸಿಕೊಂಡಿದೆ.ಇದರ ಜತೆಗೆದೇಶದ ನಾಲ್ಕು ಐಐಟಿಗಳು ಅಗ್ರ ರ‍್ಯಾಂಕ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.

1400 ವಿಶ್ವವಿದ್ಯಾನಿಲಯಗಳ ಪೈಕಿ 41 ವಿಶ್ವವಿದ್ಯಾನಿಲಯಗಳು ಜಾಗತಿಕವಾಗಿ ಸ್ಥಾನ ಪಡೆದಿವೆ. ಅವುಗಳಲ್ಲಿ 12 ವಿಶ್ವವಿದ್ಯಾಲಯಗಳು ಕಳೆದ ಬಾರಿಗಿಂತ ಶ್ರೇಯಾಂಕಗಳನ್ನು ಸುಧಾರಿಸಿಕೊಂಡಿವೆ. ಕೇವಲ ಮೂರು ವಿಶ್ವವಿದ್ಯಾಲಯಗಳು ಅಗ್ರ 200 ರ‍್ಯಾಂಕ್‌ನೊಳಗಿದ್ದರೆ, 27 ವಿ.ವಿಗಳು ಅಗ್ರ 1000 ರ‍್ಯಾಂಕ್‌ಗಳ ಪಟ್ಟಿಯೊಳಗಿವೆ.

ವಿಶ್ಲೇಷಕರು ಬಿಡುಗಡೆ ಮಾಡಿರುವ ಆವೃತ್ತಿಯ ಪ್ರಕಾರ, ಕಳೆದ ವರ್ಷ 22 ಭಾರತೀಯ ವಿಶ್ವವಿದ್ಯಾಲಯಗಳು, ಉನ್ನತ ಶಿಕ್ಷಣ ಸಂಶೋಧನಾ ಸಂಸ್ಥೆಗಳು ಅಗ್ರ 1000 ರ‍್ಯಾಂಕ್ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದವು. ಈ ಬಾರಿ 27 ವಿಶ್ವವಿದ್ಯಾಲಯಗಳಲ್ಲಿ, ಆರು ವಿ.ವಿಗಳು ಅಗ್ರ 300ರೊಳಗೆ ಸ್ಥಾನ ಪಡೆದಿವೆ.

ಬಾಂಬೆಐಐಟಿ ಮತ್ತು ದೆಹಲಿಐಐಟಿ ಕ್ರಮವಾಗಿ 172 ಮತ್ತು 174ನೇ ಸ್ಥಾನದಲ್ಲಿವೆ. ಎರಡೂ ಸಂಸ್ಥೆಗಳು ಕಳೆದ ವರ್ಷದಿಂದ ಕ್ರಮವಾಗಿ ಐದು ಮತ್ತು ಹನ್ನೊಂದು ಸ್ಥಾನ ಮೇಲೇರಿವೆ. ಇವು ದೇಶದ ಮೊದಲೆರಡು ಅತ್ಯುತ್ತಮ ಉನ್ನತ ಶಿಕ್ಷಣ ಸಂಸ್ಥೆಗಳು ಎನ್ನುವ ಶ್ರೇಯ ಸಂಪಾದಿಸಿವೆ.

ಮದ್ರಾಸ್ (250), ಕಾನ್ಪುರ (264), ಖರಗ್‌ಪುರ (270), ರೂರ್ಕಿ (269), ಗುವಾಹಟಿ (284) ಮತ್ತು ಇಂದೋರ್ (296) ಸೇರಿ ಎಂಟು ಐಐಟಿಗಳು ಅಗ್ರ 300 ವಿಶ್ವವಿದ್ಯಾಲಯಗಳಲ್ಲಿ ಸ್ಥಾನ ಪಡೆದಿವೆ.

ದೆಹಲಿ ವಿಶ್ವವಿದ್ಯಾಲಯದ (521),ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (601) ಮತ್ತು ಜಾಮಿಯಾ ಮಿಲಿಯಾ ಇಸ್ಲಾಮಿಯಾ (801) ವಿಶ್ವವಿದ್ಯಾಲಯಗಳು ಶ್ರೇಯಾಂಕದಲ್ಲಿಕುಸಿತ ಕಂಡ ವಿ.ವಿಗಳಾಗಿವೆ.

ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.