ನವದೆಹಲಿ: ‘ಸೆಮಿ ಹೈಸ್ಪೀಡ್’ ರೈಲುಗಳಾದ ವಂದೇ ಭಾರತ್ ಎಕ್ಸ್ಪ್ರೆಸ್ ಮತ್ತು ಗತಿಮಾನ್ ಎಕ್ಸ್ಪ್ರೆಸ್ನ ವೇಗವನ್ನು ರೈಲ್ವೆ ಇಲಾಖೆ ತಗ್ಗಿಸಿದೆ. ಈ ರೈಲುಗಳು ಪ್ರತಿ ಗಂಟೆಗೆ 160 ಕಿ.ಮೀ. ವೇಗದ ಬದಲು ಗಂಟೆಗೆ 130 ಕಿ.ಮೀ. ವೇಗದಲ್ಲಿ ಚಲಿಸಲಿವೆ.

ರೈಲುಗಳು ಅಪಘಾತಕ್ಕೀಡಾಗುವುದನ್ನು ತಪ್ಪಿಸುವ ಸ್ವಯಂ ಚಾಲಿತ ಸುರಕ್ಷತಾ ವ್ಯವಸ್ಥೆ ‘ಕವಚ’ ಅಳವಡಿಕೆ ಕಾರ್ಯ ಪೂರ್ಣಗೊಳ್ಳುವವರೆಗೆ ಈ ರೈಲುಗಳು ಕಡಿಮೆಗೊಳಿಸಲಾದ ವೇಗದಲ್ಲಿ ಓಡಲಿವೆ ಎಂದು ರೈಲ್ವೆ ತಿಳಿಸಿದೆ.

ಈ ಕುರಿತು ರೈಲ್ವೆ ಮಂಡಳಿಯ ಸಿಗ್ನಲ್ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರು ರೈಲ್ವೆ ವಲಯಗಳಿಗೆ ಪತ್ರ ಬರೆದಿದ್ದಾರೆ.

‘‘ಕವಚ’ ವ್ಯವಸ್ಥೆಯನ್ನು ಅಳವಡಿಸುವ ಕಾರ್ಯವನ್ನು ಎಲ್ಲ ರೈಲ್ವೆ ವಲಯಗಳು ಚುರುಕುಗೊಳಿಸಬೇಕು. ಈ ವ್ಯವಸ್ಥೆ ಅಳವಡಿಕೆ ಕಾರ್ಯ ಪೂರ್ಣಗೊಳ್ಳುವವರೆಗೆ ಈ ರೈಲುಗಳು ಗಂಟೆಗೆ ಗರಿಷ್ಠ 130 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ’ ಎಂದು ತಿಳಿಸಿದ್ದಾರೆ.

ಪ್ರಸ್ತುತ, ಹಜರತ್ ನಿಜಾಮುದ್ದೀನ್(ನವದೆಹಲಿ) ಮತ್ತು ಆಗ್ರಾ ನಡುವೆ ಒಂದು ಗತಿಮಾನ್ ಎಕ್ಸ್ಪ್ರೆಸ್ ಹಾಗೂ ಎರಡು ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳು ಮಾತ್ರ ಗಂಟೆಗೆ 160 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ರೈಲುಗಳು ಈ ವೇಗದಲ್ಲಿ ಸಂಚರಿಸಲು ಇಲ್ಲಿನ ಹಳಿಗಳು ಸೂಕ್ತವಾಗಿವೆ.

ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ಸಂಭವಿಸಿದ ಕಾಂಚನಜುಂಗಾ ಎಕ್ಸ್ಪ್ರೆಸ್ ಅಪಘಾತದ ಹಿನ್ನೆಲೆಯಲ್ಲಿ ರೈಲ್ವೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಈ ರೈಲುಗಳ ವೇಗದ ಮೇಲೆ ಜೂನ್್ 25ರಿಂದಲೇ ಮಿತಿ ಹೇರಲಾಗಿದೆ ಎಂದು ಮೂಲಗಳು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.