ನವದೆಹಲಿ: ಅಪಘಾತಗಳ ಕಾರಣ ಪತ್ತೆಗೆ ನೆರವಾಗುವ ಉದ್ದೇಶದಿಂದ ವಿಮಾನಗಳಲ್ಲಿ ಇರುವಂತೆಯೇ ರೈಲುಗಳಲ್ಲಿಯೂ ಬ್ಲ್ಯಾಕ್ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆ ಚಿಂತನೆ ನಡೆಸಿದೆ.

ಎಂಜಿನ್ ಕ್ಯಾಬಿನ್ನಲ್ಲಿ ಧ್ವನಿ ಮುದ್ರಿಕೆ (ಎಲ್ಸಿವಿಆರ್) ಉಪಕರಣ ಅಭಿವೃದ್ಧಿ ಹಂತದಲ್ಲಿದೆ. ಪ್ರಾಯೋಗಿಕ ಪರೀಕ್ಷೆ ಯಶಸ್ವಿಯಾದ ಬಳಿಕ ಈ ವ್ಯವಸ್ಥೆಯನ್ನು ಅಳವಡಿಸಲಾಗುತ್ತದೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಎಂಜಿನ್ ಬಳಿ ಅಳವಡಿಸಲಾಗುವ ಈ ಉಪಕರಣ, ಧ್ವನಿ ಮತ್ತು ದೃಶ್ಯ ಮುದ್ರಿಸಲಿದೆ. ರಿಯಲ್ ಟೈಮ್ ಆಧಾರದಲ್ಲಿ ರೈಲು ಸಂಚಾರದ ಹಲವು ಆಯಾಮಗಳ ಮೇಲೂ ಬ್ಲ್ಯಾಕ್ಬಾಕ್ಸ್ ನಿಗಾ ವಹಿಸಲಿದೆ. ಎಂಜಿನ್ ಸಹಜವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದಾದಲ್ಲಿ ಈ ಕುರಿತು ಚಾಲಕರಿಗೆ ಎಚ್ಚರಿಕೆ ನೀಡಲಿದೆ. ವೈರ್, ಕೇಬಲ್ಗಳು, ಕನೆಕ್ಟರ್ಗಳ ತಾಪಮಾನದ ಮೇಲೂ ಕಣ್ಣಿಡಲಿದೆ.

ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ರೀತಿ, ಎಂಜಿನ್ ನಿರ್ವಹಣೆಯಲ್ಲಿನ ಸಮಸ್ಯೆ, ಮನುಷ್ಯರು ಎಸಗುವ ತಪ್ಪುಗಳನ್ನು ಸಹ ಇದು ಗುರುತಿಸಲಿದೆ ಎಂದು ಅಧಿಕಾರಿ ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.