ರಾಯಪುರ(ಜಾರ್ಖಂಡ್): ಇಲ್ಲಿನ ರೈಲು ನಿಲ್ದಾಣದಲ್ಲಿ ಶನಿವಾರ ಮುಂಜಾನೆ ಡಿಟೊನೇಟರ್‌ಗಳಿದ್ದ ಪೆಟ್ಟಿಗೆಯೊಂದು ಬೋಗಿಗೆ ಸ್ಥಳಾಂತರಿಸುವ ವೇಳೆ ಆಕಸ್ಮಿಕವಾಗಿ ಬಿದ್ದು ಸ್ಪೋಟಗೊಂಡ ಪರಿಣಾಮ, ಬೋಗಿಯೊಳಗಿದ್ದ ನಾಲ್ವರು ಸಿಆರ್‌ಪಿಎಫ್ ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಬೆಳಿಗ್ಗೆ 6.30ಕ್ಕೆ ರಾಯಪುರ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್‌ಪಿಎಫ್) ಸಿಬ್ಬಂದಿಯನ್ನು ಒಡಿಶಾದ ಝಾರ್‌ಸುಗುಡಾದಿಂದ ಜಮ್ಮುವಿಗೆ ಕರೆದೊಯ್ಯುತ್ತಿದ್ದ ವಿಶೇಷ ರೈಲು, ರಾಯಪುರದ ನಿಲ್ದಾಣದಲ್ಲಿ ನಿಂತಿತ್ತು. ಈ ವೇಳೆ ಡಿಟೊನೇಟರ್‌ಗಳು ಮತ್ತು ಎಚ್‌ಡಿ ಕಾರ್ಟ್ರಿಡ್ಜ್‌ಗಳಿದ್ದ ಪೆಟ್ಟಿಗೆಯನ್ನು ಸ್ಥಳಾಂತರಿಸುವಾಗ ಬೋಗಿ ಸಂಖ್ಯೆ 9 ರಲ್ಲಿ ಆಕಸ್ಮಿಕವಾಗಿ ಅದು ಕೆಳಗೆ ಬಿತ್ತು. ಇದು ಲಘು ಸ್ಪೋಟಕ್ಕೆ ಕಾರಣವಾಯಿತು‘ ಎಂದು ರಾಯಪುರ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಅಗ್ರವಾಲ್ ಹೇಳಿದರು.

ಓದಿ:ಜಮ್ಮು–ಕಾಶ್ಮೀರ: ಭದ್ರತಾ ಪಡೆಗಳಿಗೆ ಸಿಕ್ಕಿಬಿದ್ದ ಎಲ್ಇಟಿ ಕಮಾಂಡರ್ ಖಾಂಡೆ

‘ಘಟನೆಯಲ್ಲಿ ನಾಲ್ವರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅವರಲ್ಲಿ ಹೆಡ್ ಕಾನ್‌ಸ್ಟೆಬಲ್ ಚೌಹಾಣ್ ವಿಕಾಸ್ ಲಕ್ಷ್ಮಣ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ನಂತರ ಪ್ರಯಾಣ ಮುಂದುವರಿಸಿದರು‘ ಎಂದು ಅವರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.