ಜೈಪುರ: ರಾಜಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಕಳೆದ 25 ವರ್ಷಗಳಿಂದ ಅಧಿಕಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಪ್ರತಿ ಬಾರಿ ಬದಲಾವಣೆಗೊಂಡಿದೆ. ರಾಜಸ್ಥಾನದ ಮತದಾರರು ಪ್ರತಿ ಚುನಾವಣೆಯಲ್ಲೂ ಪಕ್ಷಗಳನ್ನು ಬದಲಿಸುವ ಮೂಲಕ ಅಧಿಕಾರ ಖಾತ್ರಿ ಇಲ್ಲ ಎಂಬ ಸಂದೇಶವನ್ನು ಪಕ್ಷಗಳಿಗೆ ನೀಡುತ್ತಾ ಬಂದಿದ್ದಾರೆ. ಅದಕ್ಕೆ 2023ರ ಚುನಾವಣೆಯೂ ಹೊರತಾಗಿಲ್ಲ.

ಕಳೆದ ಐದು ಚುನಾವಣೆಗಳಿಂದ ನಡೆದುಕೊಂಡು ಬಂದಿರುವ ಈ ಪರಂಪರೆ ಈ ಬಾರಿ ಕೊನೆಗೊಳ್ಳುವ ವಿಶ್ವಾಸದಲ್ಲಿ ಕಾಂಗ್ರೆಸ್ ಇತ್ತು. ಆದರೆ ಅದೇ ಸಂಪ್ರದಾಯವನ್ನು ನಂಬಿಕೊಂಡು ಬಿಜೆಪಿ ತನ್ನ ಉತ್ಸಾಹವನ್ನು ಇಮ್ಮಡಿಗೊಳಿಸಿಕೊಂಡಿತ್ತು. ಮತ ಎಣಿಕೆಯಲ್ಲಿ ಬಿಜೆಪಿ ಭಾರೀ ಮುನ್ನಡೆ ಕಾಯ್ದುಕೊಂಡಿರುವುದುದು 25 ವರ್ಷಗಳ ಸಂಪ್ರದಾಯವನ್ನು ಮುಂದುವರಿಸಿರುವ ಸ್ಪಷ್ಟ ಸೂಚನೆಯನ್ನು ಮತದಾರರು ನೀಡಿದ್ದಾರೆ.

ರಾಜ್ಯದಲ್ಲಿ ಹಿಂದೆ ನಡೆದಿದ್ದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಜಯಕ್ಕೆ ಸಚಿನ್ ಪೈಲಟ್ ಅವರಿಗೆ ಶ್ರೇಯ ಸಲ್ಲಿಕೆಯಾಗಿತ್ತು. ಆದರೆ ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಗೊಂದಲ ಮತದಾರರಲ್ಲಿತ್ತು. ಮುಖ್ಯಮಂತ್ರಿ ಅಶೋಕ್ ಗೆಹಲೋತ್ ವಿರುದ್ಧ ಬಹಿರಂಗ ಸಮರ ಸಾರಿದ್ದ ಸಚಿನ್, ಪಾದಯಾತ್ರೆ ಮೂಲಕ ಸರ್ಕಾರವನ್ನು ಇಕ್ಕಟ್ಟಿಗೆ ಸಲುಕಿಸಿದ್ದರು. ಇದು ಮತದಾರರಲ್ಲಿ ಗೊಂದಲ ಮೂಡಿಸಿತ್ತು.
.Election Result 2023 Quick Guide: ಫಲಿತಾಂಶ ಪೂರ್ಣ ಚಿತ್ರಣ ಇಲ್ಲಿದೆ.
1993ರ ಚುನಾವಣೆ

ಬಿಜೆಪಿ 95 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ 76 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಭೈರೋನ್ ಸಿಂಗ್ ಶೇಖಾವತ್ ಅವರು ಮುಖ್ಯಮಂತ್ರಿಯಾಗಿ ಮುಂದುವರಿದರು.
.Rajasthan Election Results | ರಾಜಸ್ಥಾನದಲ್ಲಿ BJPಗೆ ಸ್ಪಷ್ಟ ಬಹುಮತ: ಠಾಕೂರ್.
1998ರ ಚುನಾವಣೆ

ಕಾಂಗ್ರೆಸ್ 153 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಬಿಜೆಪಿ 33 ಸ್ಥಾನಗಳಲ್ಲಷ್ಟೇ ಗೆಲುವು ಸಾಧಿಸಲು ಸಾಧ್ಯವಾಗಿತ್ತು. ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಕಾಂಗ್ರೆಸ್ 77 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿತ್ತು. ಬಿಜೆಪಿ 62 ಸ್ಥಾನಗಳನ್ನು ಕಳೆದುಕೊಂಡಿತ್ತು.

ಚುನಾವಣಾ ಫಲಿತಾಂಶ ಹೊರಬಿದ್ದ ನಂತರ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ಅಶೋಕ್ ಗೆಹಲೋತ್ ಅಧಿಕಾರ ವಹಿಸಿಕೊಂಡರು.
.Election Results 2023: ಮ.ಪ್ರದೇಶ, ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಜೆಪಿ, ತೆಲಂಗಾಣದಲ್ಲಿ 'ಕೈ'.
2003ರ ಚುನಾವಣೆ

ಬಿಜೆಪಿ 120 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತ್ತು. ಕಾಂಗ್ರೆಸ್ ಕೇವಲ 56 ಸ್ಥಾನಗಳನ್ನು ಗೆದ್ದುಕೊಂಡಿತು. ಬಿಜೆಪಿ ತನ್ನ ಬಲವನ್ನು 87ರಷ್ಟು ಹೆಚ್ಚಿಸಿಕೊಂಡರೆ, ಕಾಂಗ್ರೆಸ್ 97 ಕ್ಷೇತ್ರಗಳನ್ನು ಕಳೆದುಕೊಂಡಿತು.

ಅಶೋಕ್ ಗೆಹಲೋತ್ ಅಧಿಕಾರ ಕಳೆದುಕೊಂಡರು. ವಸುಂಧರಾ ರಾಜೆ ಮುಖ್ಯಮಂತ್ರಿಯಾದರು.
.Telangana Election: ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದರೆ ಸಿಎಂ ಆಯ್ಕೆ ಸವಾಲು.
2008ರ ಚುನಾವಣೆ

ಮತದಾರರ ಚಿತ್ತ ಕಾಂಗ್ರೆಸ್‌ನತ್ತ ವಾಲಿತು. ಈ ಚುನಾವಣೆಯಲ್ಲಿ ಕಾಂಗ್ರೆಸ್ 96 ಸ್ಥಾನಗಳಲ್ಲಿ ಗೆಲುವು ದಾಖಲಿಸಿತು. ಬಿಜೆಪಿ ಅಭ್ಯರ್ಥಿಗಳು 42 ಕ್ಷೇತ್ರಗಳಲ್ಲಿ ಪರಾಭವಗೊಂಡಿದ್ದರಿಂದ 78 ಸ್ಥಾನಕ್ಕೆ ಕುಸಿಯಿತು. ಈ ಚುನಾವಣೆಯಲ್ಲಿ ಮಾಯಾವತಿ ಅವರ ಬಿಎಸ್‌ಪಿ 6 ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿತು.

ಮುಖ್ಯಮಂತ್ರಿಯಾಗಿ ಅಶೋಕ್ ಗೆಹಲೋತ್ ಮತ್ತೆ ಗದ್ದುಗೆ ಏರಿದರು.
.Madhya Pradesh Election Results Live | ಬಹುಮತದತ್ತ ಬಿಜೆಪಿ.
2013ರ ಚುನಾವಣೆ

ಪಕ್ಷಗಳ ನಡುವಿನ ಅಧಿಕಾರದ ಹೊಯ್ದಾಟ 2013ರಲ್ಲೂ ಮುಂದುವರಿಯಿತು. ಈ ಬಾರಿ ಬಿಜೆಪಿ ದಾಖಲೆಯ 163 ಸ್ಥಾನಗಳನ್ನು ಗೆದ್ದುಕೊಂಡಿತು. ಹಿಂದಿನ ಚುನಾವಣೆಗಿಂತ 85 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದುಕೊಂಡಿತು. ಮತ್ತೊಂದೆಡೆ ಕಾಂಗ್ರೆಸ್ 75 ಕ್ಷೇತ್ರಗಳಲ್ಲಿ ಪರಾಭವಗೊಂಡು 21 ಸ್ಥಾನಗಳನ್ನಷ್ಟೇ ಗೆಲುವು ದಾಖಲಿಸಿತು.

ವಸುಂಧರಾ ರಾಜೆ ಮತ್ತೊಮ್ಮೆ ಮುಖ್ಯಮಂತ್ರಿಯಾದರು.
.Assembly Election Results 2023| ‘ಇಂಡಿಯಾ’ ಮೇಲೆ ಪರಿಣಾಮ ಬೀರಲಿರುವ ಫಲಿತಾಂಶ .
2018ರ ಚುನಾವಣೆ

ಈ ಚುನಾವಣೆಯಲ್ಲಿ ಯುಪಿಎ ಒಕ್ಕೂಟವು 100 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಕಳೆದ ಬಾರಿ ಕಳೆದುಕೊಂಡಿದ್ದ ಕ್ಷೇತ್ರಗಳಿಗಿಂತ ಹೆಚ್ಚುವರಿಯಾಗಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ದಾಖಲಿಸಿತು. ಮತ್ತೊಂದೆಡೆ ಪ್ರತಿಸ್ಪರ್ಧಿ ಬಿಜೆಪಿ 90 ಸ್ಥಾನಗಳನ್ನು ಕಳೆದುಕೊಂಡು 73ಕ್ಕೆ ತೃಪ್ತಿಪಟ್ಟುಕೊಂಡು ಅಧಿಕಾರ ಕಳೆದುಕೊಂಡಿತು.

ಅಶೋಕ್ ಗೆಹಲೋತ್ ಮೂರನೇ ಬಾರಿ ಮುಖ್ಯಮಂತ್ರಿಯಾದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.