ಅಹಮದಾಬಾದ್: ರಾಜ್‌ಕೋಟ್ ಅಗ್ನಿ ದುರಂತದಲ್ಲಿ ಮೃತಪಟ್ಟ 27 ಮಂದಿಯ ಹೆಸರನ್ನು ಗುಜರಾತ್ ಸರ್ಕಾರವು ಬುಧವಾರ ಬಿಡುಗಡೆ ಮಾಡಿದೆ. ಮೃತಪಟ್ಟ ಎಲ್ಲರೂ 12ರಿಂದ 45 ವರ್ಷ ವಯಸ್ಸಿನ ನಡುವಿನವರು.

ಮೃತರು ಹಾಗೂ ಅವರ ಸಂಬಂಧಿಗಳ ಡಿಎನ್ಎ ತಾಳೆ ಆಗಿದ್ದು, ಮೃತ ದೇಹಗಳನ್ನು ಕುಟುಂಬದ ಸದಸ್ಯರಿಗೆ ಹಸ್ತಾಂತರಿಸಲಾಗಿದೆ.

ಟಿಆರ್‌ಪಿ ಗೇಮ್ ಜೋನ್‌ನಲ್ಲಿ ಅಗ್ನಿ ದುರಂತ ನಡೆದ ರಾತ್ರಿಯೇ ಮೃತದೇಹಗಳನ್ನು ಪತ್ತೆ ಮಾಡಲಾಗಿತ್ತು. ಅವುಗಳ ಡಿಎನ್‌ಎ ಮಾದರಿಯನ್ನು ಹಾಗೂ ಸಂಬಂಧಿಕರ ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಅವುಗಳನ್ನು ಗಾಂಧಿನಗರದ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿತ್ತು. ಡಿಎನ್‌ಎ ಪರೀಕ್ಷೆಯ ಮೂಲಕ 27 ಮೃತದೇಹಗಳನ್ನು ಗುರುತಿಸಲಾಗಿದ್ದು, ಅವುಗಳನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ ಎಂದು ಸರ್ಕಾರ ಹೇಳಿದೆ.

ನಿರ್ದಿಷ್ಟ ಸಂಖ್ಯೆಯ ಜನರು ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಯ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಎಂದು ತಪ್ಪು ಮಾಹಿತಿಯನ್ನು ಕೆಲವರು ಹರಡುತ್ತಿದ್ದಾರೆ. ತಪ್ಪು ಮಾಹಿತಿಯನ್ನು ಆಸ್ಪತ್ರೆಯು ಅಲ್ಲಗಳೆದಿದೆ ಎಂದು ಸರ್ಕಾರ ಹೇಳಿದೆ.

ತಪ್ಪು ಮಾಹಿತಿ ಹರಡಿದ ಆರೋಪದ ಅಡಿಯಲ್ಲಿ ಹಿತೇಶ್ ಲಭಶಂಕರ ಪಾಂಡ್ಯ ಎನ್ನುವವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಗೇಮ್ ಜೋನ್‌ನ ಪಾಲುದಾರರಲ್ಲಿ ಒಬ್ಬರಾದ ಪ್ರಕಾಶ್ ಹಿರಾನ್ ಎನ್ನುವವರು ಕೂಡ ದುರಂತದಲ್ಲಿ ಮೃತಟ್ಟಿದ್ದಾರೆ ಎಂದು ಸರ್ಕಾರ ಖಚಿತಪಡಿಸಿದೆ. ನವ ವಿವಾಹಿತರಾಗಿದ್ದ ವಿವೇಕ್ ಮತ್ತು ಖುಶಾಲಿ ಎನ್ನುವವರು ಕೂಡ ಬೆಂಕಿಗೆ ಸಿಲುಕಿ ಮೃತಪಟ್ಟವರಲ್ಲಿ ಸೇರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.