ನವದೆಹಲಿ: ಸಂಸತ್ತಿನಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಭಾಷಣ ಮಾಡುವಾಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮೊಬೈಲ್‌ನಲ್ಲಿ ಮಗ್ನರಾಗಿದ್ದರು.ರಾಹುಲ್ ಅವರ ಈ ವರ್ತನೆಯನ್ನು ಟೀಕಿಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್, ಸಂಸತ್ತಿನಲ್ಲಿರುವ ಮಕ್ಕಳಿಗೆ ಮತ್ತು ಮಕ್ಕಳ ಮನೋಭಾವದ ವ್ಯಕ್ತಿಗಳಿಗೆ ಯೋಗ ಸಹಕಾರಿ ಎಂದಿದ್ದಾರೆ.

ತರಗತಿಯಲ್ಲಿ ಶಿಕ್ಷಕರು ಕಲಿಸುತ್ತಿರುವಾಗ ಅದರತ್ತ ಗಮನ ಹರಿಸುವುದು ಕಷ್ಟವಾಗಿರಬಹುದು.ಪರೀಕ್ಷೆ ವೇಳೆಯಲ್ಲಿ ಪಠ್ಯ ಪುಸ್ತಕದ ಮೇಲೆ ಗಮನ ಹರಿಸುವುದೂ ಕಷ್ಟವೇ.ನಾವು ನಿದ್ದೆ ಹೋಗುತ್ತೇವೆ, ಆದರೆ ಚಿಂತಿಸಬೇಡಿ.ಶಾಲೆಯಲ್ಲಿ ಮಕ್ಕಳು ಇರುವಂತೆ ಸಂಸತ್ತಿನಲ್ಲಿಯೂ ಮಕ್ಕಳಿದ್ದಾರೆ ಎಂದು ವಿಶ್ವ ಯೋಗದಿನದಂಗವಾಗಿ ತಿರುವನಂತಪುರಂನಲ್ಲಿ ಬಿಜೆಪಿ ಆಯೋಜಿಸಿರುವ ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಮ್ ಮಾಧವ್ಹೇಳಿದ್ದಾರೆ.

ಗುರುವಾರ ರಾಷ್ಟ್ರಪತಿಯವರು ಲೋಕಸಭೆಯನ್ನುದ್ದೇಶಿಸಿ ಭಾಷಣ ಮಾಡುತ್ತಿದ್ದಾಗ ರಾಹುಲ್ ಮೊಬೈಲ್ ಫೋನ್‌ನಲ್ಲಿ ಸ್ಕ್ರಾಲ್ ಮಾಡುತ್ತಾ ಕುಳಿತಿದ್ದರು.

ರಾಹುಲ್ ವರ್ತನೆ ಖಂಡಿಸಿದ ರಾಮ್ ಮಾಧವ್, ನಮ್ಮ ರಾಷ್ಟ್ರಪತಿಯವರ ಭಾಷಣಕ್ಕೂ ಅವರು ಗಮನ ಹರಿಸುವುದಿಲ್ಲ. ಅವರು ಮೊಬೈಲ್ ಸ್ಕ್ರಾಲ್ ಮಾಡುತ್ತಾ, ಸಂದೇಶಗಳನ್ನು ನೋಡುತ್ತಿರುತ್ತಾರೆ ಇಲ್ಲವೇ ವಿಡಿಯೊ ಗೇಮ್ ಆಡುತ್ತಾರೆ.ಇದು ಅಸ್ಥಿರ ಮನಸ್ಸಿನ ಮಕ್ಕಳ ಮನೋಭಾವ, ಇದನ್ನು ನಿಯಂತ್ರಿಸಲು ಯೋಗ ಮಾಡಬೇಕು ಎಂದು ರಾಹುಲ್‌ಗೆ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.