ಭೋಪಾಲ್: ಬಿಜೆಪಿ ನಾಯಕ ರಾಮ್ನಿವಾಸ್ ರಾವತ್ ಅವರು ಮಧ್ಯಪ್ರದೇಶದ ಸಂಪುಟ ಸಚಿವರಾಗಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು. ಆ ಮೂಲಕ ಮೋಹನ್ ಯಾದವ್ ಅವರು ಮುಖ್ಯಮಂತ್ರಿಯಾದ ಏಳು ತಿಂಗಳ ನಂತರ ಮೊದಲ ಬಾರಿ ಸಂಪುಟ ವಿಸ್ತರಣೆ ಮಾಡಿದರು.

ಪ್ರಮಾಣವಚನದ ವೇಳೆ ರಾವತ್ ಅವರು ‘ರಾಜ್ಯ ಕೆ ಮಂತ್ರಿ’ (ಸಂಪುಟ ಸಚಿವ) ಎಂದು ಹೇಳುವ ಬದಲು ರಾಜ್ಯಮಂತ್ರಿ (ಸಹಾಯಕ ಸಚಿವ) ಎಂದು ಹೇಳಿದರು. ಈ ವೇಳೆ ಅಲ್ಲಿದ್ದ ಮಾಧ್ಯಮ ಪ್ರತಿನಿಧಿಗಳು ಗೊಂದಲಕ್ಕೆ ಒಳಗಾದರು.

ಅಧಿಕಾರಿಗಳು ಈ ವಿಚಾರ ತಿಳಿದ ನಂತರ, ರಾವತ್ ಅವರು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದರು.

ರಾಜಭವನದ ದರ್ಬಾರ್ ಹಾಲ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗುಭಾಯಿ ಪಟೇಲ್ ಅವರು ಮತ್ತೊಮ್ಮೆ ಪ್ರಮಾಣವಚನ ಸ್ವೀಕರಿಸಿದರು. ರಾವತ್ ಅವರು ‘ರಾಜ್ಯ ಕೆ ಮಂತ್ರಿ’ ಆಗಿ ಪ್ರಮಾಣವಚನ ಸ್ವೀಕರಿಸಿದರು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದರು.

ಈ ವರ್ಷದ ಏಪ್ರಿಲ್ 30ರಂದು ಲೋಕಸಭಾ ಚುನಾವಣಾ ಸಂದರ್ಭದಲ್ಲಿ ರಾವತ್ ಕಾಂಗ್ರೆಸ್ಗೆ ರಾಜೀನಾಮೆ ನೀಡಿ, ಬಿಜೆಪಿಗೆ ಸೇರ್ಪಡೆಯಾಗಿದ್ದರು. ಆದರೆ, ಇದುವರೆಗೂ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿಲ್ಲ.

ರಾವತ್ ಸೇರ್ಪಡೆಯಿಂದ ಮೋಹನ್ ಯಾದವ್ ಸೇರಿದಂತೆ ಸಂಪುಟದ ಸದಸ್ಯರ ಸಂಖ್ಯೆ 32ಕ್ಕೆ ಏರಿಕೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.