ಚಂಡೀಗಡ: ಶಿರೋಮಣಿ ಅಕಾಲಿ ದಳ (ಸಂಯುಕ್ತ) ಸಹ ಸಂಸ್ಥಾಪಕ ರಂಜಿತ್ ಸಿಂಗ್ ಬ್ರಹ್ಮಪುರ ಅವರು ಶಿರೋಮಣಿ ಅಕಾಲಿ ದಳಕ್ಕೆ (ಎಸ್ಎಡಿ) ಗುರುವಾರ ಮರು ಸೇರ್ಪಡೆ ಆದರು.

ರಂಜಿತ್, ಪಕ್ಷದ ಹಿರಿಯ ಉಪಾಧ್ಯಕ್ಷ ಉಜಾಗರ್ ಸಿಂಗ್ ವದಾಲಿ, ಪ್ರಧಾನ ಕಾರ್ಯದರ್ಶಿ ಕರ್ನೈಲ್ ಸಿಂಗ್ ಪೀರ್ ಮೊಹಮ್ಮದ್ ಮತ್ತು ಇತರ ನಾಯಕರು ಎಸ್ಎಡಿ ಸೇರಿದರು. ಎಸ್ಎಡಿ ಹಿರಿಯ ನಾಯಕ ಪ್ರಕಾಶ್ ಸಿಂಗ್ ಬಾದಲ್ ಮತ್ತು ಮುಖ್ಯಸ್ಥ ಸುಖಬೀರ್ ಸಿಂಗ್ ಬಾದಲ್ ಮತ್ತಿತರರು ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು.

2018ರಲ್ಲಿ ರಂಜಿತ್ ಅವರನ್ನು ಎಸ್ಎಡಿಯಿಂದ ಉಚ್ಚಾಟಿಸಲಾಗಿತ್ತು. ಅವರು ಎಸ್ಎಡಿ (ತಕ್ಸಾಲಿ) ಎಂಬ ಪಕ್ಷ ಸ್ಥಾಪಿಸಿದ್ದರು. ಸುಖ್ದೇವ್ ಸಿಂಗ್ ದಿಂಡ್ಸಾ ಅವರನ್ನು ಎಸ್ಎಡಿ 2020ರಲ್ಲಿ ಉಚ್ಚಾಟಿಸಿತು. ಅವರು ಎಸ್ಎಡಿ (ಡೆಮಾಕ್ರೆಟಿಕ್) ಎಂಬ ಪಕ್ಷ ಸ್ಥಾಪಿಸಿದ್ದರು. ಬಳಿಕ ದಿಂಡ್ಸಾ ಮತ್ತು ರಂಜಿತ್ ಇಬ್ಬರೂ ತಮ್ಮ ಪಕ್ಷಗಳನ್ನು ವಿಲೀನಗೊಳಿಸಿ ಎಸ್ಎಡಿ (ಸಂಯುಕ್ತ) ಎಂಬ ಪಕ್ಷಕ್ಕೆ ಚಾಲನೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.