ಜೈಪುರ: 9 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ 25 ವರ್ಷದ ವ್ಯಕ್ತಿಗೆ ಜೈಪುರ ನ್ಯಾಯಾಲಯ ಮಂಗಳವಾರ 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಕೃತ್ಯ ನಡೆದ ಕೇವಲ 9 ದಿನಗಳಲ್ಲಿ ಅಪರಾಧಿಗೆ ಶಿಕ್ಷೆ ಪ್ರಕಟವಾಗಿರುವುದು ಈ ಪ್ರಕರಣದ ವಿಶೇಷ.

ಜೈಲು ಶಿಕ್ಷೆಯ ಜೊತೆಗೇ ಅಪರಾಧಿ ಕಮಲೇಶ್ ಮೀನಾಗೆ ನ್ಯಾಯಾಲಯ ₹2 ಲಕ್ಷ ದಂಡ ವಿಧಿಸಿದೆ. ಪ್ರಕರಣವನ್ನು ಕೋರ್ಟ್‌ಗೆ ಒಯ್ದ ಐದು ‘ಕರ್ತವ್ಯ ದಿನ’ಗಳ ಅವಧಿಯಲ್ಲಿ ತೀರ್ಪು ಪ್ರಕಟವಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಜೈಪುರ ದಕ್ಷಿಣ) ಹರೇಂದ್ರ ಕುಮಾರ್ ಹೇಳಿದರು.

ಸೆಪ್ಟೆಂಬರ್ 26ರಂದು ಅಪರಾಧಿಯು ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದ. ಜೈಪುರ ಮೆಟ್ರೊಪಾಲಿಟನ್ ಪೋಕ್ಸೊ ನ್ಯಾಯಾಲಯವು ಅತ್ಯಂತ ಕ್ಷಿಪ್ರಗತಿಯಲ್ಲಿ ತೀರ್ಪು ನೀಡಿದೆ ಎಂದು ಅವರು ತಿಳಿಸಿದರು.

ಐಪಿಸಿ ಮತ್ತು ‘ಪೋಕ್ಸೊ’ ಕಾಯ್ದೆ ಅಡಿಯಲ್ಲಿ ಸೆಪ್ಟೆಂಬರ್ 26ರ ಮಧ್ಯರಾತ್ರಿ ಕೋತ್ಖವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಮರುದಿನ ಮುಂಜಾನೆ ಆರೋಪಿಯನ್ನು ಬಂಧಿಸಲಾಯಿತು.

ಪ್ರಕರಣ ದಾಖಲಾದ 18 ಗಂಟೆಗಳಲ್ಲಿ ಆತನ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲಾಯಿತು. ನ್ಯಾಯಾಲಯವು ಐದು ‘ಕರ್ತ್ಯವ್ಯ ದಿನ’ಗಳಲ್ಲೇ ವಿಚಾರಣೆಯನ್ನು ಪೂರ್ಣಗೊಳಿಸಿದೆ. ಇಂದು ತೀರ್ಪು ಪ್ರಕಟವಾಗಿದೆ ಎಂದು ಹರೇಂದ್ರ ಕುಮಾರ್ ತಿಳಿಸಿದರು.

ವಿವಿಧ ಕೆಲಸಗಳಿಗಾಗಿ ಸುಮಾರು 150ಕ್ಕೂ ಹೆಚ್ಚು ಪೊಲೀಸರು ತನಿಖೆಯಲ್ಲಿ ತೊಡಗಿಸಿಕೊಂಡಿದ್ದರು. ಸಿಬ್ಬಂದಿಯ ಸಾಮೂಹಿಕ ಪ್ರಯತ್ನದಿಂದಾಗಿ, ಚಾರ್ಜ್ ಶೀಟ್ ಅನ್ನು ಕಡಿಮೆ ಸಮಯದಲ್ಲಿ ಸಲ್ಲಿಸಲಾಗಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.