ನವದೆಹಲಿ: ಅಕ್ಟೋಬರ್ 2ರಂದು ತೆರೆಕಂಡಜೋಕರ್, ವಾರ್ ಮತ್ತು ಸೈ ರಾ ನರಸಿಂಹ ರೆಡ್ಡಿಈ ಮೂರು ಸಿನಿಮಾಗಳು ಒಂದೇ ದಿನ ₹120 ಕೋಟಿ ಗಳಿಸಿವೆ. ದೇಶದ ಆರ್ಥಿಕತೆ ಉತ್ತಮವಾಗಿದೆ ಎಂಬುದನ್ನು ಇದು ತೋರಿಸುತ್ತದೆ ಎಂದಿದ್ದರು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ .

ದೇಶದಲ್ಲಿ ಆರ್ಥಿಕ ಹಿಂಜರಿತ ಇಲ್ಲ ಎಂದು ಹೇಳುವುದಕ್ಕಾಗಿ ಸಿನಿಮಾಗಳ ಬಾಕ್ಸ್ ಆಫೀಸ್ ಕಲೆಕ್ಷನ್‌ನ್ನು ಉದಾಹರಣೆಯಾಗಿ ನೀಡಿದ ಕೇಂದ್ರ ಸಚಿವರ ಈ ಹೇಳಿಕೆ ಟೀಕೆಗೊಳಗಾಗಿತ್ತು.

ಶನಿವಾರ ಈ ರೀತಿಯ ಹೇಳಿಕೆ ನೀಡಿದ್ದ ರವಿಶಂಕರ್ ಪ್ರಸಾದ್ ತನ್ನ ಹೇಳಿಕೆ ಸಂದರ್ಭೋಚಿತ ಅಲ್ಲ. ಹಾಗಾಗಿ ಅದನ್ನು ಹಿಂಪಡೆಯುತ್ತೇನೆ ಎಂದು ಹೇಳಿದ್ದಾರೆ.

ತಮ್ಮ ಹೇಳಿಕೆ ಬಗ್ಗೆ ಭಾನುವಾರ ಪ್ರತಿಕ್ರಿಯಿಸಿದ ಸಚಿವರು, ನಾನು ಮಾಧ್ಯಮಗಳೊಂದಿಗೆ ಮಾತನಾಡಿದ ವಿಡಿಯೊ ನನ್ನ ಸಾಮಾಜಿಕ ತಾಣದಲ್ಲಿದೆ. ನನ್ನ ಹೇಳಿಕೆಯಲ್ಲಿನ ಒಂದೇ ಒಂದು ಭಾಗ ಸಂದರ್ಭೋಚಿತವಲ್ಲ. ಅದಕ್ಕೆ ನಾನು ಖೇದ ವ್ಯಕ್ತ ಪಡಿಸುತ್ತೇನೆ. ಒಬ್ಬ ಸೂಕ್ಷ್ಮ ಸಂವೇದನಾ ವ್ಯಕ್ತಿಯಾಗಿರುವುದರಿಂದ ಆ ಹೇಳಿಕೆಯನ್ನು ನಾನು ಹಿಂಪಡೆಯುತ್ತೇನೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.