ನವದೆಹಲಿ: ಸ್ವಾತಂತ್ರ್ಯ ಹೋರಾಟಗಾರ ಮತ್ತು ಭಾರತದ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಜಾದ್ ಅವರಿಗೆ ಸಂಬಂಧಿಸಿದ ಉಲ್ಲೇಖಗಳನ್ನು 11 ನೇ ತರಗತಿಯ ಹೊಸ ರಾಜ್ಯಶಾಸ್ತ್ರ ಪಠ್ಯಪುಸ್ತಕದಿಂದ ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್ಸಿಇಆರ್ಟಿ) ತೆಗೆದುಹಾಕಿದೆ.

ಕಳೆದ ವರ್ಷ ತನ್ನ ‘ಪಠ್ಯ ತರ್ಕಬದ್ಧಗೊಳಿಸುವ ಕಾರ್ಯ ನಡೆಸಿರುವ ಎನ್ಸಿಇಆರ್ಟಿ, ಅಪ್ರಸ್ತುತ ಮತ್ತು ವ್ಯಾಪ್ತಿಮೀರಿದ ವಿಷಯ ಎಂಬ ಕಾರಣ ನೀಡಿ ಗುಜರಾತ್ ಗಲಭೆಗಳು, ಮೊಘಲ್ ಯುಗ, ತುರ್ತು ಪರಿಸ್ಥಿತಿ, ಶೀತಲ ಸಮರ, ನಕ್ಸಲ್ ಚಳವಳಿಯೂ ಸೇರಿದಂತೆ ಹಲವು ವಿಷಯಗಳನ್ನು ಪಠ್ಯದಿಂದ ಕೈ ಬಿಟ್ಟಿದೆ.

ಆದರೆ, ತರ್ಕಬದ್ಧಗೊಳಿಸುವಿಕೆಯ ಟಿಪ್ಪಣಿಯಲ್ಲಿ 11 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದಲ್ಲಾದ ಬದಲಾವಣೆಗಳ ಉಲ್ಲೇಖವಿಲ್ಲ.

ಈ ವರ್ಷ ಯಾವುದೇ ಪಠ್ಯಕ್ರಮವನ್ನು ಪರಿಷ್ಕರಣೆ ಮಾಡಿಲ್ಲ. ಕಳೆದ ವರ್ಷ ಜೂನ್ನಲ್ಲಿ ಪಠ್ಯಕ್ರಮವನ್ನು ತರ್ಕಬದ್ಧಗೊಳಿಸಲಾಗಿದೆ ಎಂದು ಎನ್ಸಿಇಆರ್ಟಿ ಹೇಳಿಕೊಂಡಿದೆ.

‘ತರ್ಕಬದ್ಧಗೊಂಡ ಪುಸ್ತಕದಲ್ಲಿ ಬದಲಾವಣೆಗಳನ್ನು ಉಲ್ಲೇಖಿಸದಿರುವುದು ಮೇಲ್ವಿಚಾರಣೆ ಕೊರತೆಯಿಂದ ಆಗಿದ್ದಿರಬಹುದು’ ಎಂದು ಎನ್ಸಿಇಆರ್ಟಿ ನಿರ್ದೇಶಕ ದಿನೇಶ್ ಸಕ್ಲಾನಿ ತಿಳಿಸಿದ್ದಾರೆ.

11 ನೇ ತರಗತಿಯ ರಾಜ್ಯಶಾಸ್ತ್ರ ಪಠ್ಯಪುಸ್ತಕದ ಮೊದಲ ಅಧ್ಯಾಯದಲ್ಲಿದ್ದ 'ಸಂವಿಧಾನ - ಏಕೆ ಮತ್ತು ಹೇಗೆ' ಎಂಬ ಶೀರ್ಷಿಕೆಯ ಪಾಠದಲ್ಲಿದ್ದ ಸಂವಿಧಾನದ ಶಾಸನ ಸಮಿತಿಗೆ ಸಂಬಂಧಿಸಿದ ಭಾಗದಲ್ಲಿದ್ದ ವಾಕ್ಯವೊಂದನ್ನು ಪರಿಷ್ಕರಣೆ ಮಾಡಲಾಗಿದ್ದು, ಆಜಾದ್ ಅವರ ಹೆಸರನ್ನು ತೆಗೆದು ಹಾಕಲಾಗಿದೆ.

ಪರಿಷ್ಕೃತ ಸಾಲಿನಲ್ಲಿ, ‘ಸಾಮಾನ್ಯವಾಗಿ, ಜವಾಹರಲಾಲ್ ನೆಹರು, ರಾಜೇಂದ್ರ ಪ್ರಸಾದ್, ಸರ್ದಾರ್ ಪಟೇಲ್ ಅಥವಾ ಬಿಆರ್ ಅಂಬೇಡ್ಕರ್ ಈ ಸಮಿತಿಗಳ ಅಧ್ಯಕ್ಷರಾಗಿದ್ದರು’ ಎಂದು ಮಾಡಲಾಗಿದೆ.

ಅದೇ ಪಠ್ಯಪುಸ್ತಕದ ಹತ್ತನೇ ಅಧ್ಯಾಯದ ‘ಸಂವಿಧಾನದ ತತ್ವಶಾಸ್ತ್ರ’ ಎಂಬ ಶೀರ್ಷಿಕೆಯ ಪಾಠದಲ್ಲಿ ಜಮ್ಮು ಮತ್ತು ಕಾಶ್ಮೀರದ ಷರತ್ತುಬದ್ಧ ಸೇರ್ಪಡೆಯ ಉಲ್ಲೇಖವನ್ನು ಸಹ ಅಳಿಸಲಾಗಿದೆ.

‘ಸಂವಿಧಾನದ 370 ನೇ ವಿಧಿಯ ಅಡಿಯಲ್ಲಿ ಸ್ವಾಯತ್ತತೆಯನ್ನು ಕಾಪಾಡುವ ಬದ್ಧತೆಯ ಆಧಾರದಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಭಾರತೀಯ ಒಕ್ಕೂಟಕ್ಕೆ ಸೇರಿಸಲಾಯಿತು’ ಎಂದು ಈ ಹಿಂದೆ ವಿವರಿಸಲಾಗಿತ್ತು.

2009ರಲ್ಲಿ ಪ್ರಾರಂಭಿಸಲಾಗಿದ್ದ ಮೌಲಾನಾ ಆಜಾದ್ ಫೆಲೋಶಿಪ್ ಅನ್ನು ಕಳೆದ ವರ್ಷ, ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯವು ಸ್ಥಗಿತಗೊಳಿಸಿತ್ತು. ಈ ಫೆಲೋಶಿಪ್ ಅಡಿಯಲ್ಲಿ ಆರು ಅನುಸೂಚಿತ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಐದು ವರ್ಷಗಳವರೆಗೆ ಹಣಕಾಸಿನ ನೆರವು ನೀಡಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.