ನವದೆಹಲಿ: ರಾಷ್ಟ್ರೀಯ ಮಹಿಳಾ ಆಯೋಗದ (ಎನ್‌ಸಿಡಬ್ಲ್ಯು) ಅಧ್ಯಕ್ಷೆ ರೇಖಾ ಶರ್ಮಾ ಅವರ ಅಧಿಕಾರಾವಧಿ ಮಂಗಳವಾರ ಕೊನೆಗೊಂಡಿದೆ. 60 ವರ್ಷದ ಶರ್ಮಾ, 2018ರ ಆಗಸ್ಟ್ 7ರಂದು ಎನ್‌ಸಿಡಬ್ಲ್ಯು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದರು.

‘ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನನ್ನ ಒಂಬತ್ತು ವರ್ಷಗಳ ಅಧಿಕಾರಾವಧಿ ಮಂಗಳವಾರ ಕೊನೆಗೊಂಡಿದೆ. ಈ ಒಂಬತ್ತು ವರ್ಷಗಳ ಅಧಿಕಾರಾವಧಿ ಭಾರಿ ಏರಿಳಿತಗಳಿಂದ ಕೂಡಿತ್ತು. ತುಂಬಾ ವಿನಮ್ರವಾದ ಹಿನ್ನೆಲೆಯಿಂದ ಬಂದು, ಮೂರು ಅವಧಿಯನ್ನು ಪೂರ್ಣಗೊಳಿಸಿ ದ್ದೇನೆ’ ಎಂದು ಇಲ್ಲಿ ವರದಿಗಾರರಿಗೆ ತಿಳಿಸಿದರು.

ಇತ್ತೀಚಿನ ಮಣಿಪುರ ಹಿಂಸಾಚಾರದಲ್ಲೂ ಅವರು ಮಹಿಳೆಯರ ಪರ ಧ್ವನಿ ಎತ್ತಲಿಲ್ಲ ಎನ್ನುವ ಆರೋಪಗಳು ಸೇರಿದಂತೆ ಹಲವು ವಿವಾದಗಳಿಗೂ ಅವರು ಗುರಿಯಾಗಿದ್ದರು.

ಬಿಜೆಪಿಯೇತರ ಸರ್ಕಾರವಿರುವ ರಾಜ್ಯಗಳಲ್ಲಿ ವರದಿಯಾಗುವ ಪ್ರಕರಣಗಳಲ್ಲಿ ಇವರು ಕ್ರಮ ಕೈಗೊಳ್ಳುತ್ತಿರಲಿಲ್ಲ ಎನ್ನುವ ಆಪಾದನೆ ರೇಖಾ ಅವರ ಮೇಲಿತ್ತು. ಆದರೆ, ಈ ಆರೋಪವನ್ನು ಅವರು ಬಲವಾಗಿ ತಳ್ಳಿಹಾಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.